ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿರುವ ಜಾಸ್ಮಿನ್ ಭಾಸಿನ್ ಇದೀಗ ತೀವ್ರ ಕಣ್ಣಿನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಾಗಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ನಟಿ ತಮಗಾದ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ. ಲೆನ್ಸ್ ಧರಿಸುತ್ತಿದ್ದ ಜಾಸ್ಮಿನ್ ಭಾಸಿನ್ ಸರಿಯಾಗಿ ಧರಿಸದ ಕಾರಣ ಕಾರ್ನಿಯಾ ಗಾಯಗೊಂಡು ಕಣ್ಣು ಊದಿಕೊಂಡಿತ್ತು. ಹೀಗಾಗಿ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ದೃಷ್ಠಿ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ನಟಿ ಹೇಳಿಕೊಂಡಿದ್ದಾರೆ.
ಜುಲೈ 17 ರಂದು ನಟಿಗೆ ತೀವ್ರ ಕಣ್ಣಿನ ನೋವು ಕಾಣಿಸಿಕೊಂಡಿದೆ. ದೆಹಲಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಾಸ್ಮಿನ್ಗೆ ಕಣ್ಣಿನ ನೋವು ತೀವ್ರಗೊಂಡಿದೆ. ಆದರೆ ಸತತ ಕಾರ್ಯಕ್ರಮಗಳ ಕಾರಣ ವೈದ್ಯರನ್ನು ಬೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನೋವು ಉಲ್ಬಣಿಸಿದೆ. ಬಳಿಕ ಮುಂಬೈಗೆ ಮರಳಿದ ನಟಿ ದಿಢೀರ್ ವೈದ್ಯರ ಭೇಟಿಯಾಗಿದ್ದಾರೆ.
ತಪಾಸಣೆ ವೈದ್ಯರು ಆಸ್ಪತ್ರೆ ದಾಖಲಾಗಲು ಸೂಚಿಸಿದ್ದಾರೆ. ಸರಿಯಾಗಿ ಲೆನ್ಸ್ ಧರಿಸಿದ ಕಾರಣ ನಟಿ ಕಾರ್ನಿಯಾಗೆ ಹಾನಿಯಾಗಿದೆ. ಇದರಿಂದ ಕಣ್ಣುಗಳು ಊದಿಕೊಂಡು ನೋವು ಕಾಣಿಸಿಕೊಂಡಿದೆ. ತಕ್ಷಣವೇ ನಟಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಎರಡೂ ಕಣ್ಣುಗಳಿಗೆ ಬ್ಯಾಂಡೇಜ್ ಹಾಕಲಾಗಿದೆ.ಚೇತರಿಕೆಗೆ ಕನಿಷ್ಠ 5 ರಿಂದ 6 ದಿನಗಳ ಅವಶ್ಯಕತೆ ಇದೆ. ಸದ್ಯ ಕಣ್ಣುಗಳಿಗೆ ಬ್ಯಾಂಡೇಜ್ ಹಾಕಿರುವ ಕಾರಣ ಕಣ್ಣು ಕಾಣುತ್ತಿಲ್ಲ ಎಂದು ನಟಿ ಹೇಳಿಕೊಂಡಿದ್ದಾರೆ.
ಜಾಸ್ಮಿನ್ ಕನ್ನಡದಲ್ಲಿ ಕೋಮಲ್ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಜಾಸ್ಮಿನ್ ಭಾಸಿನ್ ಕಾಣಿಸಿಕೊಂಡಿದ್ದಾರೆ. 2011ರಲ್ಲಿ ತಮಿಳು ಚಿತ್ರ ವಾನಂ ಮೂಲಕ ಸಿನಿ ಕರಿಯರ್ ಆರಂಭಿಸಿದ ಜಾಸ್ಮಿನ್ ಟ್ವಿಂಕಲ್ ತನೇಜಾ, ತೆನೆ ಬನುಶಲಿ ದಿಲ್ ಸೆ ದಿಲ್ ತಕ್ ಸೇರಿದಂತೆ ಹಲವು ಜನಪ್ರಿಯ ಸಿನಿಮಾ ಹಾಗೂ ಸೀರಿಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಖತ್ರೋ ಕಿ ಕಿಲಾಡಿ, ಹಿಂದಿ ಬಿಗ್ ಬಾಸ್ 14ರಲ್ಲೂ ಜಾಸ್ಮಿನ್ ಕಾಣಿಸಿಕೊಂಡು ಖ್ಯಾತಿ ಗಳಿಸಿದ್ದಾರೆ.
ಇದೀಗ ಲೆನ್ಸ್ ಸಮಸ್ಯೆಯಿಂದ ದೃಷ್ಟಿ ಕಳೆದುಕೊಳ್ಳುವ ಹಂತಕ್ಕೆ ತಲುಪಿರುವುದು ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಲೆನ್ಸ್ ಧರಿಸುವರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಿದ್ದಾರೆ. ವೈದ್ಯರ ಸಲಹೆ ಸೂಚನೆಗಳಿಲ್ಲದೆ ಲೆನ್ಸ್ ಧರಿಸುವುದು, ಮರು ಬಳಕೆ ಮಾಡುವುದು ಅತ್ಯಂತ ಅಪಾಯಕಾರಿ ಎಂದಿದ್ದಾರೆ.