ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಹಾಗೂ ಫೋಟೋ ಕಳುಹಿಸಿದ್ದಾನೆ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು ದರ್ಶನ್ ಎಂಡ್ ಗ್ಯಾಂಗ್ ಸದಸ್ಯರು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಈ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ. ವಿಚಾರಣಾಧೀನ ಖೈದಿಯಾಗಿರುವ ದರ್ಶನ್ ಗೆ 6106 ನಂಬರ್ ನೀಡಲಾಗಿದೆ. ಆದರೀಗ ಇದೇ ನಂಬರ್ ಅನ್ನು ದರ್ಶನ್ ಅಭಿಮಾನಿಯೊಬ್ಬ ಲಕ್ಕೀ ನಂಬರ್ ಎಂದು ಹೇಳಿಕೊಂಡಿದ್ದಾನೆ. ಮಾತ್ರವಲ್ಲದೆ ಅದೇ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದಿದ್ದಾನೆ.
ದರ್ಶನ್ ರ ಅಭಿಮಾನಿಯಾಗಿರೋ ಮೈಸೂರು ಮೂಲದ ಧನುಷ್ ಎಂಬಾತ 6106 ಇನ್ಮುಂದೆ ನಮಗೆ ಇದೇ ಲಕ್ಕಿ ನಂಬರ್. ಈ ನಂಬರ್ ನಮ್ಮ ಗಾಡಿ ಮೇಲೆ ಇರುತ್ತೆ ಎಂದು ಆರ್ ಟಿಓದಲ್ಲಿ ರಿಜಿಸ್ಟರ್ ಮಾಡಿಸಲು ಮುಂದಾಗಿದ್ದಾನೆ. ಮಾತ್ರವಲ್ಲದೆ ಈ ಕುರಿತಾಗಿ ವಿಡಿಯೋ ಮಾಡುವ ಮೂಲಕ ಹೇಳಿಕೊಂಡಿದ್ದಾನೆ.
ವಿಡಿಯೋದಲ್ಲಿ ದರ್ಶನ್ ಜೈಲುವಾಸ ನೆನೆದು ಅಭಿಮಾನಿ ಧನುಷ್ ಗಳಗಳನೆ ಕಟ್ಟೀರಿಟ್ಟಿದ್ದಾನೆ. ಶೀಘ್ರ ಬಿಡುಗಡೆಗೆ ಹರಕೆ ಹೊತ್ತಿದ್ದಾನೆ. ನಾಡ ಅಧಿದೇವತೆ ಚಾಮುಂಡಿಯಲ್ಲಿ ಹರಕೆ ಹೊರುವ ಮೂಲಕ ದರ್ಶನ್ ಬೇಗ ಹೊರಬರಲು ಪ್ರಾರ್ಥಿಸಿದ್ದು, ದರ್ಶನ್ ಬಿಡುಗಡೆಯಾದರೆ 101 ತೆಂಗಿನಕಾಯಿ ಒಡೆಯುವುದಾಗಿ ಹರಕೆ ಹೊತ್ತಿದ್ದಾನೆ.
‘ನಮ್ಮ ಬಾಸ್ ಏನೂ ತಪ್ಪೇ ಮಾಡಿಲ್ಲ. ನಮ್ಮಬಾಸನ್ನ ನಾವು ಎಂದೂ ಬಿಟ್ಟುಕೊಡೋದಿಲ್ಲ. ಕಾನೂನು ಎಲ್ಲರಿಗೂ ಒಂದೇ. ತಪ್ಪು ಮಾಡಿಲ್ಲ ಅಂದ್ರೆ ರಾಜಾರೋಷವಾಗಿ ಬರ್ತಾರೆ ಎಂದು ಧನುಷ್ ವಿಡಿಯೋದಲ್ಲಿ ಹೇಳಿದ್ದಾನೆ.