ಬೆಂಗಳೂರು : ಸಾಹಸ ಸಿಂಹ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ 14 ವರ್ಷ ಉರುಳಿದೆ. ಆದರೆ, ಈವರೆಗೆ ಅವರ ಅಂತಿಮ ಸಂಸ್ಕಾರ ನಡೆದ ಪುಣ್ಯಭೂಮಿ ಜಾಗದ ವಿವಾದ ಮಾತ್ರ ಬಗೆಹರೆದಿಲ್ಲ. ಅದಕ್ಕೊಂದು ತಾತ್ವಿಕ ಅಂತ್ಯ ಕೊಡಬೇಕು ಅಂತಲೇ ಅಭಿಮಾನಿಗಳು ‘ವಿಷ್ಣು ಪುಣ್ಯಭೂಮಿ ಹೋರಾಟ’ಕ್ಕೆ ಮುಂದಾಗಿದ್ದಾರೆ.
ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ನಮ್ಮನ್ನಗಲಿ ಇದೇ ಡಿಸೆಂಬರ್ 30ಕ್ಕೆ 14 ವರ್ಷಗಳು ತುಂಬುತ್ತೆ. ದುರಂತ ಅಂದ್ರೆ ಇಷ್ಟು ವರ್ಷಗಳ ಬಳಿಕವೂ ಅವರ ಪುಣ್ಯಭೂಮಿ ಉಳಿಸೋದಕ್ಕಾಗಿ ಅಭಿಮಾನಿಗಳು ಹೋರಾಟ ಮಾಡುವ ಸನ್ನಿವೇಶ ನಿರ್ಮಾಣ ಆಗಿದೆ. ಇಂದು ಫ್ರೀಡಂ ಪಾರ್ಕ್ನಲ್ಲಿ ವಿಷ್ಣು ಅಭಿಮಾನಿಗಳು ಪುಣ್ಯಭೂಮಿ ಹೋರಾಟ ನಡೆಸುವುದಕ್ಕೆ ಸಜ್ಜಾಗಿದ್ದಾರೆ.
2010 ಡಿಸೆಂಬರ್ 30ರಂದು ಡಾ.ವಿಷ್ಣು ಅಗಲಿಕೆಯ ಸುದ್ದಿ ಬಂದಾಗ ಇಡೀ ನಾಡೇ ಆಘಾತಕ್ಕೆ ಒಳಗಾಗಿತ್ತು. ಅಂದು ತರಾತುರಿಯಲ್ಲಿ ಅಂದಿನ ಸರ್ಕಾರ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತಿಮ ಸಂಸ್ಕಾರವನ್ನ ಮಾಡಿಬಿಟ್ಟಿತು. ಆದ್ರೆ, ನಂತರ ದಿನಗಳಲ್ಲಿ ಈ ಜಾಗದ ಸುತ್ತಲಿನ ವಿವಾದಗಳು ಹೊರಬಂದಿದ್ದು.