ಟಾಲಿವುಡ್ ಚಿತ್ರರಂಗದ ಖ್ಯಾತ ಜೋಡಿ ನಟಿ ಸಮಂತಾ ಹಾಗೂ ನಟ ನಾಗಚೈತನ್ಯ ದೂರ ದೂರವಾಗಿ ವರ್ಷಗಳೆ ಕಳೆದು ಹೋಗಿದೆ. 10 ವರ್ಷಗಳ ಕಾಲ ಸ್ನೇಹಿತರಾಗಿದ್ದು ಬಳಿಕ ಪ್ರೇಮಿಗಳಾಗಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಆದರೆ ಮದುವೆಯಾದ ಕೆಲವೇ ವರ್ಷಗಳಲ್ಲಿ ಈ ಜೋಡಿ ದೂರ ದೂರವಾಗಿದ್ದು ಇಂದಿಗೂ ಇದಕ್ಕೆ ಕಾರಣ ನಿಗೂಡವಾಗಿದೆ. ನಾಗಚೈತನ್ಯರಿಂದ ದೂರವಾಗಿ ವರ್ಷ ಕಳೆದಿದ್ದರು ಸಮಂತಾ ಮೈಮೇಲಿರುವ ನಾಗಚೈತನ್ಯ ಟ್ಯಾಟೂ ಮಾತ್ರ ಇನ್ನೂ ಹಾಗೆಯೇ ಇದೆ.
ಮದುವೆ ನಂತರ ಸಮಂತಾ ಪತಿ ನಾಗ ಚೈತನ್ಯ ಅವರ ಸಹಿಯನ್ನು ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರು. ‘ವೈಎಂಸಿ’ ಎಂದು ಬರೆಯಿಸಿದ್ದ ಆ ಟ್ಯಾಟೂದ ವಿಸ್ತ್ರತರೂಪ ‘ಯೇ ಮಾಯಾ ಚೇಸಾವೆ’ ಎಂದು. ಇದು ಈ ಜೋಡಿಯ ಸೂಪರ್ ಹಿಟ್ ಸಿನಿಮಾ. ಜೊತೆಗೆ ನಾಗ ಚೈತನ್ಯ ಅವರ ಸಹಿಯನ್ನೂ ಹೊಟ್ಟೆಯ ಮೇಲೆ ಹಾಕಿಸಿಕೊಂಡಿದ್ದರು. ಡಿವೋರ್ಸ್ ನಂತರ ಆ ಟ್ಯಾಟೂವನ್ನುಉಳಿಸಿಕೊಂಡಿದ್ದಾರೆ ನಟಿ ಸಮಂತಾ.
ಡಿವೋರ್ಸ್ ಬಳಿಕ ನಟಿ ಸಮಂತಾ ಹೆಚ್ಚು ಹೆಚ್ಚು ಹಾಟ್ ಆಗಿ ಕಾಣಿಸಿಕೊಳ್ತಿದ್ದಾರೆ. ಯಾವುದೇ ಸಿನಿಮಾದಲ್ಲಿ ನಟಿಸಿದರು ಮೈಮೇಲಿರುವ ಟ್ಯಾಟೂ ಎದ್ದು ಕಾಣಿಸುತ್ತಿದೆ. ಹಾಗಾಗಿ ಗಂಡನಿಂದ ದೂರವಾದ ಬಳಿಕ ಆ ಟ್ಯಾಟೂ ಯಾಕೆ? ಟ್ಯಾಟುವನ್ನು ತೆಗೆಸಿಬಿಡಿ ಎಂದು ಅಭಿಮಾನಿಗಳು ಸಮಂತಾಗೆ ಕೇಳಿಕೊಳ್ಳುತ್ತಿದ್ದಾರೆ.
ಸದ್ಯ ಸಮಂತಾ ಹಿಂದಿಯ ಸಿಟಡೆಲ್ ವೆಬ್ ಸೀರಿಸ್ ನಲ್ಲಿ ತೊಡಗಿಕೊಂಡಿದ್ದಾರೆ. ವರುಣ್ ಧವನ್ ಗೆ ಜೋಡಿಯಾಗಿ ನಟಿಸುತ್ತಿರುವ ಸಮಂತಾ ಸದ್ಯ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಿದ್ದು ಹಳೆಯದೆಲ್ಲವನ್ನು ಮರೆತು ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.