ಬೆಂಗಳೂರು: ಇಂದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟಿರುವ ರಿಷಬ್ ಶೆಟ್ಟಿ ಇದೇ ಮೊದಲ ಭಾರಿಗೆ ಸಖತ್ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ನಂದಿಲಿಂಕ್ಸ್ ಗ್ರೌಂಡ್ ನಲ್ಲಿ ಸ್ನೇಹಿತರು, ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಬರ್ತಡೇಯನ್ನು ಆಚರಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ಇದೇ ಮೊದಲಬಾರಿಗೆ ಇಷ್ಟು ಗ್ರ್ಯಾಂಡ್ ಆಗಿ ಬರ್ತಡೇ ಅಚರಿಸಿಕೊಂಡಿದ್ದಾರೆ. ರಿಷಬ್ ಶೆಟ್ಟಿಗೆ ವಿಶ್ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಿ ಶುಭ ಕೋರಿದ್ದಾರೆ. ಅಷ್ಟೇ ಅಲ್ಲ ರಿಷಬ್ ಶೆಟ್ಟಿ ಅವರ ಹುಟ್ಟುಹಬ್ಬಕ್ಕೆ ಪಕ್ಕದ ರಾಜ್ಯಗಳಿಂದಲೂ ಫ್ಯಾನ್ಸ್ ಆಗಮಿಸಿದ್ದಾರೆ.
ರಿಷಬ್ ಶೆಟ್ಟಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಂದಿಲಿಂಕ್ಸ್ ಗ್ರೌಂಡ್ ನಲ್ಲಿ ಬೃಹತ್ ವೇದಿಕೆ ಹಾಕಿ ಎಲ್ ಇಡಿ ಸ್ಕ್ರೀನ್ ಮತ್ತು ಲೈಟಿಂಗ್ ಅರೇಂಜ್ ಮೆಂಟ್ ಮಾಡಲಾಗಿದೆ. ಎಂಟುಸಾವಿರ ಜನಕ್ಕೆ ಊಟದ ವ್ಯವಸ್ಥೆ ಮಾಡಲಾಗಿದ್ದು ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ, ಸೆಲ್ಪಿ ಕ್ಲಿಕ್ಕಿಸಿಕೊಂಡು ರಿಷಬ್ ಸಂಭ್ರಮಿಸಿದ್ದಾರೆ. ಜೊತೆಗೆ ಅಭಿಮಾನಿಗಳ ಜೊತೆ ಊಟ ಮಾಡಿ ಖುಷಿ ಪಟ್ಟಿದ್ದಾರೆ.
ಇನ್ನೂ ರಿಷಬ್ ಬರ್ತಡೇಗೆ ವರುಣನ ಕಾಟ ಕೂಡ ಕಾಣಿಸಿಕೊಂಡಿದೆ. ನಾಯಂಡನಹಳ್ಳಿಯಲ್ಲಿ ಭಾರಿ ಮಳೆಯಾದ ಹಿನ್ನೆಲೆಯಲ್ಲಿ ನಂದಿ ಲಿಂಕ್ ಮೈದಾನದಲ್ಲಿ ನಿಂತ ನೀರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಆದರೂ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿಅಭಿಮಾನಿಗಳು ಆಗಮಿಸಿದ ಕಾಂತಾರದ ಶಿವನಿಗೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಟ ರಿಷಬ್ ಶೆಟ್ಟಿ, ಮಳೆ ಬಂದ್ರು ನನಗಾಗಿ ಕಾಯ್ತಿದಿರಲ್ವ ಇದು ನಿಜವಾದ ಸಂಪಾದನೆ. ನನ್ನಂತ ಮಿಡಲ್ ಕ್ಲಾಸ್ ಹುಡುಗನಿಗೆ ಸಿನಿಮಾ ಕನಸಿಗೆ ಜೀವ ತುಂಬಿದ ಅಭಿಮಾನಿಗಳು ನೀವು ಎಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ವರನಟ ಅಣ್ಣಾವ್ರನ್ನ ನೆನಪು ಮಾಡಿಕೊಂಡರು. ಇದೇ ವೇಳೆ ಅಭಿಮಾನಿಗಳಿಗೋಸ್ಕರ ಭರ್ಜರಿ ಡೈಲಾಗ್ ಹೊಡೆದು ನೆರದಿದ್ದವರನ್ನು ರಂಜಿಸಿದರು.
ರಿಷಬ್ ಶೆಟ್ಟಿ ಬರ್ತಡೇ ಹಿನ್ನೆಲೆಯಲ್ಲಿ ಪತ್ನಿ ಪ್ರಗತಿ ಶೆಟ್ಟಿ, ರಿಷಬ್ ಶೆಟ್ಟಿ ಫೌಂಡೇಶನ್ ಸ್ಥಾಪಿಸಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ಶಿಕ್ಷಣದಿಂದ ಮಕ್ಕಳು ವಂಚಿತರಾಗಬಾರದು ಅಂದು ಟ್ರಸ್ಟ್ ಶುರುಮಾಡಿದ್ದಾಗಿ ಪ್ರಗತಿ ಶೆಟ್ಟಿ ಹೇಳಿದ್ದಾರೆ.