ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ದರ್ಶನ್ ಜೈಲು ಸೇರಿ 100 ದಿನ ಕಳೆದಿದೆ. ಅತ್ತ ದರ್ಶನ್ ರನ್ನು ಹೊರ ತರಲು ಪತ್ನಿ ವಿಜಯಲಕ್ಷ್ಮೀ ಸಾಕಷ್ಟು ಪ್ರಯತ್ನಗಳನ್ನ ಮಾಡ್ತಿದ್ದು ದೇವರ ಮೊರೆ ಹೋಗ್ತಿದ್ದಾರೆ. ಇತ್ತ ದರ್ಶನ್ ಅಭಿಮಾನಿಗಳು ದರ್ಶನ್ ಬಿಡುಗಡೆಗೆ ಪ್ರಾರ್ಥಿಸಿ ದೇವಿಯ ಮೊರೆ ಹೋಗಿದ್ದು ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ. ಅನಂತ ಪೂರ್ಣಿಮ ದಿನದಂದು ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ತಂಗನಹಳ್ಳಿ ಕಾಳಿಕಾಂಬ ದೇವಿಗೆ ದರ್ಶನ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಹಾಗಾಗಿ ಸಂಕಷ್ಟದಲ್ಲಿರುವ ದರ್ಶನ್ ಆದಷ್ಟು ಬೇಗ ಜೈಲಿನಿಂದ ಹೊರಬರಲಿ ಅಂತ ಶಕ್ತಿ ದೇವತೆ ಕಾಳಿಕಾಂಬ ದೇವಿಯ ಮೊರೆ ಹೋಗಿದ್ದಾರೆ ಫ್ಯಾನ್ಸ್. ದೇವಿಯ ಆರಾದಿಸಿದರೆ ಎಂತಹ ಕಷ್ಟಗಳಿದ್ರೂ ನಿವಾರಣೆ ಆಗ್ತದೆ ಎಂಬುದು ಇಲ್ಲಿನ ಗ್ರಾಮಸ್ಥರ ನಂಬಿಕೆಯಾಗಿದ್ದು, ಸೆ.18ರ ರಾತ್ರಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೂದುಕುಂಬಳಕಾಯಿ ದೀಪ ಬೆಳಗಿಸಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ. ಅಭಿಮಾನಿಗಳು ಕೈಯಲ್ಲಿ ಬೂದುಕುಂಬಳಕಾಯಿ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇಡೀ ರಾತ್ರಿ ಬೂದುಗುಂಬಳ ಕಾಯಿ ದೀಪ ಆರದಂತೆ ಕಾವಲು ಕಾದಿದ್ದಾರೆ.