ಪಿ.ಎಂ. ಕಿಸಾನ್ ಯೋಜನೆ ಅಡಿ ರೈತ ಬಂಧುಗಳು ಆರ್ಥಿಕವಾಗಿ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. ಮಾಡಿಸಲು ಬಾಕಿ ಇರುವಂತಹ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಸೂಚನೆ ನೀಡಿದೆ. ನೀವು ಇನ್ನೂ ಈ ಕೆವೈಸಿ ಅನ್ನು ಪೂರ್ಣಗೊಳಿಸದಿದ್ದರೆ, ನೀವು ಮೊದಲು ಈ ಕೆವೈಸಿ ಅನ್ನು ಪೂರ್ಣಗೊಳಿಸಬೇಕು.ಇಲ್ಲದಿದ್ರೆ, ಈ 18 ನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ರೆ ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮೊದಲು ಬ್ಯಾಂಕಿಗೆ ಹೋಗಿ ಮತ್ತು ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಅನ್ನು ಮೊದಲು ಲಿಂಕ್ ಮಾಡಿಸಿಕೊಳ್ಳಿ ಇದರಿಂದ ಮಾತ್ರ ನೀವು ಹಣವನ್ನು ಪಡೆದುಕೊಳ್ಳಲು ಸಾಧ್ಯ..
ಸದ್ಯ, ರೈತರು ಪಿಎಂ-ಕಿಸಾನ್ ಯೋಜನೆಯ 17 ಕಂತುಗಳನ್ನು ಪಡೆದಿದ್ದಾರೆ. ರೈತರು 18 ನೇ ಕಂತಿಗಾಗಿ ಕಾಯುತ್ತಿದ್ದಾರೆ. ಆದ್ರೆ ಈ ಕೆಲಸವನ್ನು ಮಾಡದಿದ್ರೆ ನಿಮಗೆ ಹಣವು ಅದಷ್ಟು ಬೇಗ ಜಮಾ ಆಗಲ್ಲ.
ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಲಿಂಕ್ ಮಾಡಿ: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮೊದಲು ನಿಮ್ಮ ಖಾತೆ ಇರುವ ಬ್ಯಾಂಕಿಗೆ ಹೋಗಿ ಖಾತೆಗೆ ಆಧಾರ್ ಕಾರ್ಡ್ ಮೊದಲೇ ಲಿಂಕ್ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಿ. ಇಲ್ಲವಾದರೇ ಕೂಡಲೇ ಲಿಂಕ್ ಮಾಡಿಸಿ.
ನೀವು ಪಿಎಂ ಕಿಸಾನ್ ಗೆ ಅರ್ಜಿ ಸಲ್ಲಿಸುವುದು ಮತ್ತು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವುದು ಬಹಳ ಮುಖ್ಯ. ನಿಮ್ಮ ಹೆಸರು ಈ ಪಟ್ಟಿಯಲ್ಲಿ ಇಲ್ಲದಿದ್ದರೆ, ಕಂತನ್ನು ನಿಮ್ಮ ಖಾತೆಗೆ ಜಮಾ ಮಾಡಲು ಸಾಧ್ಯವಿಲ್ಲ. ನಿಮ್ಮಯ ಆಧಾರ್ ಕಾರ್ಡ್ ಸಂಖ್ಯೆಯೊಂದಿಗೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಮೊದಲು ನೀವು ಪರಿಶೀಲಿಸಬಹುದು. ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಸ್ಥಿತಿಯನ್ನು ಪರಿಶೀಲಿಸಲು PM ಕಿಸಾನ್ ಯೋಜನಾ ವೆಬ್ ಸೈಟ್ ಅನ್ನು ಸಹ https://pmkisan.gov.in ಗೆ ಭೇಟಿ ನೀಡಿ.