ಬೆಂಗಳೂರು: ತಂದೆ ಮಗ ಇಬ್ರೂ ಸೇರಿ ಸ್ಕೆಚ್ ಹಾಕಿ ಕಳ್ಳತನ ಮಾಡಿದ್ರು.ಕೋಟಿ ಕೋಟಿ ಬೆಲೆಯ ಚಿನ್ನಾಭರಣ ಕದ್ದು ಪೊಲೀಸರಿಗೆ ಸಾಕ್ಷಿಸಿಗಂತೆ ಮಾಡಿ ಪರಾರಿನೂ ಆಗಿದ್ರು . ಆದ್ರೆ ಪೊಲೀಸರು ಬಿಡಬೇಕಲ್ಲ. ಕಳ್ಳ ತಂದೆ ಮಗನನ್ನು ಬಂಧಿಸಿದ ಪೊಲೀಸರು ಜೈಲು ಕಂಬಿ ಹಿಂದೆ ತಳ್ಳಿದ್ದಾರೆ.. ತಂದೆ ಮಗನ ಕಳ್ಳತನದ ಕಂಪ್ಲೀಟ್ ಸ್ಟೋರಿ ತೋರಿಸ್ತೀವಿ ನೋಡಿ… ಈಗ ಬೆಂಗಳೂರಿನಲ್ಲಿ ಯಾರೂ ಯಾರನ್ನೂ ನಂಬುವ ಸ್ಥಿತಿ ಇಲ್ಲ. ಹೌದು. ಕಳ್ಳರು ಯಾವ ಯಾವ ಸೋಗಿನಲ್ಲಿ ಬರ್ತಾರೆ ಅಂತ ಗೊತ್ತೇ ಆಗುವುದಿಲ್ಲ.ಮನೆಗೆ ಬಂದು ಹೋಗುತ್ತಿದ್ದವರೇ ಕ್ಷಣಾರ್ಧದಲ್ಲಿ ಎಲ್ಲವೂ ಎಗರಿಸಿಕೊಂಡು ಎಸ್ಕೇಪ್ ಆಗ್ಬಿಟ್ಟಿರ್ತಾರೆ.
ಕಮಲ ಎನ್ನುವವರು ಮಾದನಾಯಕಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಕಡಬಗರೆಯಲ್ಲಿ ಸಂದ್ಯ ಕಿರಣ ಓಲ್ಡ್ ಏಜ್ ಹೋಂ ಮತ್ತು ರಿಹ್ಯಾಬ್ಲಿಟೇಷನ್ ಸೆಂಟರ್ ನಡೆಸುತ್ತಿದ್ದಾರೆ. ಇಲ್ಲಿ ಸುಮಾರು 10 ಮಂದಿ ವೃದ್ದರು ಆಶ್ರಮದಲ್ಲಿದ್ದಾರೆ. ಆಶ್ರಮದ ಉಸ್ತುವಾರಿಯಾಗಿರುವ ಕಮಲ ಆಶ್ರಮದ ನೆಲಮಹಡಿಯಲ್ಲಿ ವಾಸವಾಗಿದ್ರು. ಈ ಆಶ್ರಮಕ್ಕೆ ಕಳೆದ ಮೂರು ವರ್ಷಗಳಿಂದ ಮಿರ್ಜಾ ಸೈಯ್ಯದ್ ಎನ್ನು ಯುವಕ 15 ದಿನಕ್ಕೊಮ್ಮೆ ಬಂದು ಶೌಚಾಲಯಗಳನ್ನು ಸ್ವಚ್ಚ ಮಾಡಿ ಹೋಗುತ್ತಿದ್ದ.. ಅದೇ ರೀತಿ ಏಪ್ರಿಲ್ 9ರಂದು ಕ್ಲೀನಿಂಗ್ ಕೆಲಸ ಮುಗಿಸಿಕೊಂಡು ಹೋಗುವಾಗ ನೆಲಮಹಡಿಯ ಮನೆಯಲ್ಲಿದ್ದ ಕಮಲ ಪ್ರಾಪರ್ಟಿ ಖರೀದಿಸಲು ಮಗ ನೀಡಿದ್ದ ಹಣ ಎಣಿಸುತ್ತಿರುವುದನ್ನ ಗಮನಿಸಿದ್ದಾನೆ.
ಅಲ್ಲದೆ ಕಮಲ ಬಳಿ ಚಿನ್ನಾಭರಣ ಇರುವುದನ್ನ ನೋಡಿದ್ದ. ಯುಗಾದಿ ಹಬ್ಬದ ದಿನ ಕಮಲ ಬನಶಂಕರಿಯಲ್ಲಿರುವ ಮಗನ ಮನೆಗೆ ಹೋಗಿದ್ದಾರೆ… ಇತ್ತ ಮನೆಯಲ್ಲಿ ಯಾರೋ ಇಲ್ಲ ಅನ್ನೋದು ಗೊತ್ತಾಗುತ್ತಿದ್ದಂತೆ ಆರೋಪಿ ಸೈಯದ್ ತನ್ನ ತಂದೆಗೆ ಕರೆ ಮಾಡಿ ಕಳ್ಳತನ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದಾನೆ. ಇದಕ್ಕೆ ಒಪ್ಪಿದ ತಂದೆ ಮಿರ್ಜಾ ದಾದಾ ನೂರುದ್ದಿನ್ ಬೇಗ್ ನನ್ನು ಅದೇ ದಿನ ರಾತ್ರಿಯು ನಗರಕ್ಕೆ ಕರೆಯಿಸಿಕೊಂಡಿದ್ದ. ಪ್ಲಾನ್ ಪ್ರಕಾರ ಮನೆಗೆ ಎಂಟ್ರಿ ಕೊಟ್ಟ ಮಗ ಮತ್ತು ತಂದೆ 1 ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದಾರೆ.ನಂತರ ಸಾಕ್ಷ್ಯಾಧಾರ ನಾಶಪಡಿಸಲು ಮನೆಯೆಲ್ಲಾ ಖಾರದಪುಡಿ ಎರಚಿಸಿದ್ದ ಎಸ್ಕೇಪ್ ಆಗಿದ್ರು.
ಇನ್ನು ಬಳ್ಳಾರಿಯ ಕಂಪ್ಲಿ ಮೂಲದ ಮಿರ್ಜಾ ಸೈಯದ್ ಬೇಗ್ ಬೆಂಗಳೂರಿಗೆ ಬಂದು ವಾಸಮಾಡಿಕೊಂಡಿದ್ದ. ಈತ ಕ್ಲೀನಿಂಗ್ ಕೆಲಸ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ. ಆಶ್ರಮದ ಸಮೀಪದಲ್ಲೇ ವಾಸವಾಗಿದ್ದ. ಅಲ್ಲದೆ ಆಟೊ ಚಾಲಕನಾಗಿದ್ದ ತಂದೆಗೆ ಮೂರು ಬಾರಿ ಹೃದಯ ಶಸ್ತ್ರಚಿಕಿತ್ಸೆ ಆಗಿದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ರಂತೆ. ಹೀಗಾಗಿ ಚಿನ್ನಾಭರಣ ಕಳ್ಳತನ ಮಾಡಿದರೆ ಸುಲಭವಾಗಿ ಜೀವನ ಮಾಡಬಹುದು ಎಂದುಕೊಂಡು ಕಳ್ಳತನ ಮಾಡಿ ಬಳ್ಳಾರಿಗೆ ಹೋಗೋಕ್ಕೆ ರೆಡಿಯಾಗಿದ್ನಂತೆ..
ಸದ್ಯ ಆರೋಪಿಗಳನ್ನು ಅರೆಸ್ಟ್ ಮಾಡಿರುವ ಪೊಲೀಸರು ಬಂಧಿತರಿಂದ 1.25 ಕೆ.ಜಿ ಚಿನ್ನಾಭರಣ 2 ಕೆ.ಜಿ.ಬೆಳ್ಳಿ ವಸ್ತುಗಳು ಹಾಗೂ 21.5 ಲಕ್ಷ ನಗದು ಹಾಗೂ ಇನ್ನಿತರ ಪೂಜಾ ವಸ್ತುಗಳನ್ನ ವಶಪಡಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಕಳ್ಳತನ ಮಾಡಿ ಆರಾಮಾಗಿ ಸೆಟಲ್ ಆದ್ವಿ ಎಂದುಕೊಂಡಿದ್ದವರನ್ನು ಮಾದನಾಯಕನಹಳ್ಳಿ ಪೊಲೀಸರು ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ