ಅಪ್ಪ ಅಂದರೆ ಆಸರೆ, ಅಪ್ಪ ಅಂದರೆ ಪ್ರೀತಿ, ಅಪ್ಪ ಅಂದರೆ ಗಾಂಭೀರ್ಯ. ಹೀಗೆ ಅಪ್ಪನನ್ನು ಪದಗಳಲ್ಲಿ ವರ್ಣಿಸಲು ಹೊಗಳಲು ಸಾಧ್ಯವೇ ಇಲ್ಲ. ಅಪ್ಪ ದೇವರು ಕೊಟ್ಟ ದೇವರು. ಎಲ್ಲಾ ಕಷ್ಟಗಳನ್ನ ತನ್ನ ಮಡಿಲಿಗೆ ಹಾಕೊಕೊಂಡು ತನ್ನವರಿಗಾಗಿ ಶ್ರಮಿಸುವ ಏಕೈಕ ಜೀವ ಅಪ್ಪ. ಅಪ್ಪನ ಶ್ರಮಕ್ಕೆ ಸರಿಸಾಟಿ ಇಲ್ಲ. ಅಪ್ಪನ ನಿಷ್ಕಲ್ಮಷ ಪ್ರೀತಿಯನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ
ಒಳ್ಳೆ ಕೆಲಸಗಳಲ್ಲಿ ಕೈ ಜೋಡಿಸುವ, ಕೆಟ್ಟ ಕೆಲಸಗಳ ಬಗ್ಗೆ ತಿಳಿ ಹೇಳುವ ಗುರು ಅಪ್ಪ. ಪ್ರೀತಿ ಮತ್ತು ಕಾಳಜಿಯುಳ್ಳ ಅಪ್ಪನ ಮಹತ್ವವನ್ನು ನೆನೆಯಲು ತಂದೆಯ ದಿನವನ್ನು ಆಚರಿಸಲಾಗುತ್ತದೆ. ಇಲ್ಲಿದೆ ತಂದೆ ದಿನದ ಶುಭಾಶಯಗಳು.
ವಿಶ್ವ ಅಪ್ಪಂದಿರ ದಿನದ ಶುಭಾಶಯಗಳು ಮತ್ತು ಸಂದೇಶಗಳು *ನೀವು ನಿಜವಾದ ಪ್ರೀತಿ, ಸ್ನೇಹಿತ, ಶಿಕ್ಷಕ, ಮಾರ್ಗದರ್ಶಕ, ಪ್ರೋತ್ಸಾಹಿ
*ಈ ದಿನದಂದು ನಿಮಗೆ ಸಂತೋಷವನ್ನು ಬಯಸುತ್ತೇನೆ. ನಾನು ನಿನ್ನನ್ನು ಯಾವಾಗಲೂ ಪ್ರೀತಿಸುವೆನು.
* ನಿಮ್ಮ ಜೀವನ ಸೂರ್ಯನಷ್ಟೇ ಪ್ರಕಾಶಮಾನವಾಗಿರಲಿ. ಸಂತೋಷದಿಂದ ಕೂಡಿರಲಿ ಎಮದು ಹಾರೈಸುತ್ತೇನೆ. *ನಾವು ನಿಮ್ಮ ಬಗ್ಗೆ ತೋರುವ ಪ್ರೀತಿ ಮತ್ತು ಗೌರವವು ನೀವು ನಿಮಗಾಗಿ ಮಾಡುವ ಚಿಂತೆ ಮತ್ತು ಕಾಳಜಿಯನ್ನು ಸರಿದೂಗಿಸಬಹುದೇ ಅಪ್ಪ.
*ನೀವು ಯಾವಾಗಲೂ ನನಗೆ ಸಹಾಯ ಮಾಡಲು ಮತ್ತು ನನ್ನೊಂದಿಗೆ ಇರಲು ಸಮಯವನ್ನು ತೆಗೆದುಕೊಂಡಿದ್ದೀರಿ. ಅದಕ್ಕಾಗಿ ಧನ್ಯವಾದಗಳು! * ಅಪ್ಪ ನನ್ನ ಆಯಸ್ಸು ನಿಮಗಿರಲಿ, ನಿನ್ನ ಕಷ್ಟ ನನಗಿರಲಿ. * ನಿಮ್ಮ ಶ್ರಮದ ಜೀವನ ಇಲ್ಲಿಗೆ ಕೊನೆಗೊಳ್ಳಲಿ. ನಿಮ್ಮೆಲ್ಲಾ ಜವಬ್ದಾರಿಯನ್ನು ನಾನು ಹೊತ್ತುಕೊಳ್ಳುವೇ ಅಪ್ಪ. *ನಿಮ್ಮ ಪ್ರೋತ್ಸಾಹಕ್ಕೆ, ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು. ನಿಮ್ಮಂತಹ ತಂದೆಯನ್ನು ಪಡೆದ ನಾನು ತುಂಬಾ ಅದೃಷ್ಟಶಾಲಿ.
ತಂದೆಯ ದಿನದ ಉಲ್ಲೇಖಗಳು *”ಅಪ್ಪ: ಮಗನ ಮೊದಲ ನಾಯಕ, ಮಗಳ ಮೊದಲ ಪ್ರೀತಿ”
*”ಮಗುವಿನ ಜೀವನದಲ್ಲಿ ತಂದೆಯ ಶಕ್ತಿಗೆ ಸಾಟಿಯಿಲ್ಲ.” -ಜಸ್ಟಿನ್ ರಿಕ್ಲೆಫ್ಸ್
*”ಒಬ್ಬ ತಂದೆ ನೂರಕ್ಕೂ ಹೆಚ್ಚು ಶಾಲಾ ಶಿಕ್ಷಕರಿಗೆ ಸಮ” – ಜಾರ್ಜ್ ಹರ್ಬರ್ಟ್
*”ಒಬ್ಬ ಹುಡುಗಿಯ ಮೊದಲ ನಿಜವಾದ ಪ್ರೀತಿ ಅವಳ ತಂದೆ.” -ಮಾರಿಸೋಲ್ ಸ್ಯಾಂಟಿಯಾಗೊ
*”ಒಬ್ಬ ತಂದೆಯ ನಗು ಮಗುವಿನ ಇಡೀ ದಿನವನ್ನು ಬೆಳಗಿಸುತ್ತದೆ.” -ಸುಸಾನ್ ಗೇಲ್
*”ತಂದೆಯು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುವುದಿಲ್ಲ. ಅದನ್ನು ತೋರಿಸುತ್ತಾನೆ. ” – ಡಿಮಿಟ್ರಿ ದಿ ಸ್ಟೋನ್ಹಾರ್ಟ್ *”ತಂದೆ ಎಲ್ಲವನ್ನೂ ಒಟ್ಟಿಗೆ ಸೇರಿಸುವ ಮಾರ್ಗವನ್ನು ಹೊಂದಿದ್ದಾರೆ.” – ಎರಿಕಾ ಕಾಸ್ಬಿ
*”ಪ್ರತಿಯೊಬ್ಬ ಮಗಳ ಸಾಧನೆ ಹಿಂದೆ ಅದ್ಭುತ ತಂದೆ ಇರುತ್ತಾನೆ.”
*”ಮಗಳ ಪ್ರೀತಿಗೆ ತಂದೆಯೇ ಮೊದಲ ಹೆಸರು.” – ಫ್ಯಾನಿ ಫರ್ನ್