ಬೆಂಗಳೂರು: ಹಣ, ಪ್ರಶಸ್ತಿಗೋಸ್ಕರ ಕೆಲಸ ಮಾಡಬೇಡಿ ಎಂದು ಇನ್ಫೋಸಿಸ್ ಫೌಂಡೇಷನ್ನ ಮುಖ್ಯಸ್ಥೆ ಸುಧಾಮೂರ್ತಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಾತನಾಡಿದ ಅವರು, ಮೊದಲು ಹೆಣ್ಣು ಮಕ್ಕಳು ಸಾಧನೆ ಮಾಡಬೇಕು. ಯಾಕಂದ್ರೆ ಹೆಣ್ಣು ಮಕ್ಕಳಲ್ಲಿ ಒಂದು ಅಗಾಧವಾದ ಶಕ್ತಿ ಇದೆ. ಅದನ್ನ ಬಳಸಿಕೊಂಡು ನೀವು ದೊಡ್ಡ ಮಟ್ಟದಲ್ಲಿ ಬೆಳಯುವ ಯೋಚನೆ ಮಾಡಬೇಕು. ನಿಮ್ಮನ್ನು ಎಂದಿಗೂ ಇತರರಿಗೆ ಹೋಲಿಸಿಕೊಂಡು ನಿಮ್ಮ ಮನಸ್ಸು ಹಾಳುಮಾಡಿಕೊಳ್ಳಬೇಡಿ ಎಂದರು.
ಹಾಗೆಯೇ ಮೊಬೈಲ್ನಲ್ಲಿ ಕೆಲಸಕ್ಕೆ ಬಾರದ ಮೆಸೇಜ್ ಓದಿ, ನಿಮ್ಮ ಕುಟುಂಬದ ನೆಮ್ಮದಿಯ ಹಾಳು ಮಾಡಿಕೊಳ್ಳಬೇಡಿ. ಇನ್ನು ತಂದೆ, ತಾಯಂದಿರು ದಯವಿಟ್ಟು ಮಕ್ಕಳಿಗೆ ಓದಿ ಅಂತಾ ಒತ್ತಡ ಹಾಕಬೇಡಿ. ಆ ಮಗುವಿಗೆ ಸುಂದರವಾದ ರೂಮ್ ಕಟ್ಟಿಸಿ ಕೊಟ್ಟೆ, ವಿದೇಶಕ್ಕೆ ಕರೆದುಕೊಂಡು ಹೋದೆ, ಅವನು ಹೇಳಿದ ಹಾಗೇ ನಾವು ಮಾಡಿದ್ದೇವೆ ಅಂತಾ ಮಕ್ಕಳ ಮೇಲೆ ಪೋಷಕರು ಒತ್ತಡ ಹೇರಬಾರದು. ಯಾಕಂದ್ರೆ ಇದು ಕಾಂಫಿಟೇಷನ್ ಯುಗ ನಿಮ್ಮ ಮಗ ಸದಾ ಕಾಂಫಿಟೇಟರ್ ಆಗಿ ಇರಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿದರು.