ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ನಿವೃತ್ತಿಗೆ ಎರಡು ತಿಂಗಳು ಇರುವಾಗ ಹಿರಿಯ ಅಧಿಕಾರಿ ರಾಜೀನಾಮೆ ನೀಡಿದ್ದಾರೆ. ಹೌದು ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪ್ರತಾಪ್ ರೆಡ್ಡಿ ವೈಯುಕ್ತಿಕ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ.
ಅಸಲಿಗೆ ವೈಯುಕ್ತಿಕ ಕಾರಣದಿಂದಲೇ ಆ ಹಿರಿಯ ಅಧಿಕಾರಿ ರಾಜೀನಾಮೆ ನೀಡಿದ್ರಾ…? ಇತ್ತಿಚೆಗೆ ಪೊಲೀಸ್ ಇಲಾಖೆಯಲ್ಲಿ ಆದ ಬದಲಾವಣೆ ಇಂದ ಈ ನಿರ್ಧಾರಕ್ಕೆ ಬಂದ್ರಾ…? ಎಂಬ ಅನುಮಾನಗಳು ಮೂಡಿಬಂದಿದೆ. ಡಿಜಿಪಿ ಆಗಿದ್ದರೂ ಕೆಲವೊಂದು ಬೆಳವಣಿಗಿಂದ ಅವರಿಗೆ ಬೇಸರ ಆಗಿತ್ತು. ಕೆಲವರು ಅವರಿಗೆ ಬೇಸರ ಆಗುವಂತೆ ನಡೆದುಕೊಂಡಿದ್ದರು. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ತಿಳಿಸಿದ್ದಾರೆ.
ಇನ್ನೂ ಪ್ರತಾಪ್ ರೆಡ್ಡಿ ಅವರು 1991ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರು. ಬರುವ ಏಪ್ರಿಲ್ 30ಕ್ಕೆ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಇತ್ತಿಚೆಗೆ ಅಷ್ಟೇ ಡಿಜಿ& ಐಜಿ ಅಲೋಕ್ ಮೋಹನ್ ಮೆಮೋ ಒಂದನ್ನು ನೀಡಿದ್ರು.
ಅರ್ಚರಿ ಗೇಮ್ಸ್ ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಮೆಮೋ ನೀಡಲಾಗಿತ್ತು. ನಿಮ್ಮ ಮೇಲೆ ಯಾಕೆ ಸೂಕ್ತ ಕ್ರಮಕೈಗೊಳ್ಳಬಾರದು ಅಂತೆ ಮೆಮೋ ನೀಡಿದ್ದರು. ಪ್ರತಾಪ್ ರೆಡ್ಡಿ ಅವರ ಜೊತೆಗೆ ಇನ್ನೂ 11 ಅಧಿಕಾರಿಗೆ ಮೆಮೋ ನೀಡಲಾಗಿದೆ. ಪ್ರತಾಪ್ ರೆಡ್ಡಿ, ಸಲೀಂ , ಅಲೋಕ್ ಕುಮಾರ್, ಸೀಮಂತ್ ಕುಮಾರ್ ಸಿಂಗ್ ಹೀಗ 11 ಅಧಿಕಾರಿಗಳಿಗೆ ಮೆಮೋ ನೀಡಲಾಗಿದೆ. ಇವೆಲ್ಲಾ ಕ್ರಮಗಳು ಪ್ರತಾಪ್ ರೆಡ್ಡಿ ಅವರಿಗೆ ಘಾಸಿ ಮಾಡಿತ್ತು ಎನ್ನಲಾಗಿದೆ.