ಮಂಡ್ಯ:- ಮಂಡ್ಯ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರನ್ನು ರಾಮಕೃಷ್ಣ, ಗುರು, ಸೋಮಶೇಖರ್ ಎಂದು ಗುರುತಿಸಲಾಗಿದೆ.
ಪ್ರಕರಣ ಸಂಬಂಧ ಈಗಾಗಲೇ 12 ಜನರನ್ನ ಬಂಧಿಸಲಾಗಿದೆ.
ಇದೀಗ ಮತ್ತೆ ಮೂವರು ಅರೆಸ್ಟ್ ಆಗಿದ್ದಾರೆ. ಈ ಪ್ರಕರಣದಲ್ಲಿ ಇನ್ನೂ ಆರೇಳು ಆರೋಪಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಮೇಲುಕೋಟೆ, ನಂಜನಗೂಡು, ಪಾಂಡವಪುರ, ಬೆಳ್ಳೂರು ಠಾಣೆಗಳಲ್ಲಿ ಪ್ರಕರಣ ಸಂಬಂಧ ಪ್ರಕರಣಗಳು ದಾಖಲಾಗಿದ್ದು ಮಂಡ್ಯ ಪೊಲೀಸರು ಮತ್ತಷ್ಟು ತನಿಖೆ ಚುರುಕುಗೊಳಿಸಿದ್ದಾರೆ.
ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದ ಹೆಣ್ಣುಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಹಣದಾಸೆಗೆ ಕರುಳಬಳ್ಳಿಗಳನ್ನ ಕೊಲ್ಲುವಂತಹ ಹೇಯ ಕೃತ್ಯವನ್ನ ಪಾಪಿಗಳು ಎಸುಗುತ್ತಿದ್ದರು. ಆರೋಗ್ಯ ಹಾಗೂ ಪೊಲೀಸ್ ಇಲಾಖೆ ಏನೆಲ್ಲ ಕ್ರಮಗಳನ್ನ ತೆಗೆದುಕೊಂಡರು ಸಕ್ಕರಿನಗರಿಯಲ್ಲಿ ಇಂತಹ ಹೇಯಕೃತ್ಯ ನಿರಂತರವಾಗಿ ನಡೆಯುತ್ತಿತ್ತು. ಅದರಲ್ಲೂ ತಮ್ಮದೇ ಆದ ನೆಟ್ ವರ್ಕ್ ಮಾಡಿಕೊಂಡು ಕರಾಳದಂಧೆಯ್ನ ಪಾಪಿಗಳು ನಡೆಸುತ್ತಿದ್ದರು. ಇನ್ನು ಇಂತಹ ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಪ್ರಕರಣದ ಕಿಂಗ್ ಪಿನ್ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಎಮ್ ಶೆಟ್ಟಿಹಳ್ಳಿ ಗ್ರಾಮದ ಅಭಿಷೇಕ್, ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ವಿರೇಶ್ ಸೇರಿ ಒಟ್ಟು 12 ಜನ ಆರೋಪಿಗಳನ್ನ ಇತ್ತೀಚೆಗೆ ಪೊಲೀಸರು ಬಂಧಿಸಿದ್ದಾರೆ