ಸ್ಪೇಸ್ ಎಕ್ಸ್ ನ ಮಾಜಿ ಉದ್ಯೋಗಿಗಳು ಎಲಾನ್ ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ, ಕಾನೂನು ಮೊರೆ ಹೋಗಿರುವ ಬೆನ್ನಲ್ಲೇ ಮತ್ತಷ್ಟು ಮಸ್ಕ್ ಗೆ ಮತ್ತಷ್ಟು ಸಂಕಷ್ಟು ಎದುರಾಗಿದೆ. ಎಲಾನ್ ಮಸ್ಕ್ ತಮ್ಮ ಸಂಸ್ಥೆಯ ಇಂಟರ್ನ್ ಸೇರಿದಂತೆ ಇಬ್ಬರು ಸಿಬ್ಬಂದಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ಆರೋಪ ಎದುರಿಸುತ್ತಿದ್ದು, 2016 ರಲ್ಲಿ ವಿಮಾನ ಪರಿಚಾಕರೊಬ್ಬರಿಗೆ ಸೆಕ್ಸ್ ಗಾಗಿ ಕುದುರೆಯ ಆಫರ್ ನೀಡಿದ್ದು ಈಗ ಬಹಿರಂಗವಾಗಿದೆ.
ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ನೀಡಿರುವ ಮಾಹಿತಿಯ ಪ್ರಕಾರ, ತನ್ನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಕೇಳಿದ್ದ ಎಲಾನ್ ಮಸ್ಕ್ ಇದಕ್ಕಾಗಿ ನನಗೆ ಕುದುರೆಯನ್ನು ಖರೀದಿ ಮಾಡಿಕೊಡುವ ಆಫರ್ ಮುಂದಿಟ್ಟಿದ್ದರು ಎಂದಿದ್ದಾರೆ.
ವಿಮಾನದಲ್ಲೇ ಎಲಾನ್ ಮಸ್ಕ್ ತನ್ನೆದುರು ಆತನ ತನ್ನ ಖಾಸಗಿ ಅಂಗ ಪ್ರದರ್ಶಿಸಿದ್ದ ಇದಕ್ಕೆ ತಾನು ಒಪ್ಪದೇ ಇದ್ದಾಗ ಸಂಸ್ಥೆಯೂ ನನ್ನ ಪಾಳಿಗಳನ್ನು ಕಡಿತಗೊಳಿಸಿತ್ತು ಎಂದು ಮಹಿಳೆ ಹೇಳಿದ್ದಾರೆ.
ಮಹಿಳೆಯ ಆರೋಪಗಳನ್ನು ನಿರಾಕರಿಸಿರುವ ಎಲನ್ ಮಸ್ಕ್, ಆಕೆಯ ಆರೋಪಗಳು “ಸಂಪೂರ್ಣವಾಗಿ ಸುಳ್ಳು” . ಇದನ್ನು “ಎಲಾನ್ ಗೇಟ್” ಎಂದು ಕರೆಯಬೇಕೆಂದು ಸಾಮಾಜಿಕ ಮಾಧ್ಯಮದಲ್ಲಿ ಎಲಾನ್ ತಮಾಷೆ ಮಾಡಿದ್ದಾರೆ.