ವಿಜಯಪುರ: ಖಾಸಗಿ ಸಂಸ್ಥೆಯ ಶಾಲಾ ಶಿಕ್ಷಕಿಯಿಂದ ವಿದ್ಯಾರ್ಥಿನಿ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ಹೌದು ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರು ಗ್ರಾಮದ ವಿದ್ಯಾಭಾರತಿ ವಿದ್ಯಾಕೇಂದ್ರದ ಶಾಲೆಯಲ್ಲಿ ಶಿಕ್ಷಕಿ ಆಗಿರೋ ಶ್ರೀದೇವಿ ಕಲ್ಮನಿ ವಿದ್ಯಾರ್ಥಿನಿ ಆರತಿ ಅಮೋಘಿ ಹೆಳವಾರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್ ಟಿ ಇ ಅಡಿಯಲ್ಲಿ ಶಾಲೆಗೆ ಆರತಿ ಹೆಳವಾರ ದಾಖಲಾಗಿದ್ದು, ವಿದ್ಯಾರ್ಥಿನಿಯಿಂದ ಶುಲ್ಕ ವಸೂಲಿ ಮಾಡಿರೋ ಆರೋಪ ಕೂಡ ಕೇಳಿಬಂದಿದೆ.
7 ನೇ ತರಗತಿಯ ಶುಲ್ಕ 4 ಸಾವಿರ ಹಣ ನೀಡುವಂತೆ ಒತ್ತಾಯ ಮಾಡಿದ್ದು, ಹಣ ನೀಡದ ಕಾರಣ ವಿದ್ಯಾರ್ಥಿನಿ ಆರತಿ ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಶಿಕ್ಷಕಿ ಶ್ರೀದೇವಿಯಿಂದ ಹಲ್ಲೆಗೊಳಗಾದ ವಿದ್ಯಾರ್ಥಿನಿ ಆರತಿ ಇಂಡಿ ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಿದ್ದು, ಚಿಕಿತ್ಸೆ ಮುಂದುವರೆದಿದೆ. ಇನ್ನೂ ಈ ಘಟನೆ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.