ಮಳೆಗಾಲದ ಸಮಯದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲುವ ಕಾರಣದಿಂದ ಸೊಳ್ಳೆಗಳ ಉತ್ಪಾದನೆ ಜಾಸ್ತಿಯಾಗುತ್ತದೆ. ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳು ಜಾಸ್ತಿ ಕಾಣಸಿಗುತ್ತದೆ. ಅದೇ ರೀತಿ ಮಳೆಗಾಲದ ಸಮಯದಲ್ಲಿ ಕಲುಷಿತಗೊಂಡ ನೀರಿನ ಸೇವನೆಯಿಂದಲೂ ಹಲವಾರು ರೋಗಗಳು ಬರುವ ಸಾಧ್ಯತೆ ಇದೆ.
ಮಳೆಗಾಲದಲ್ಲಿ ಕಂಡು ಬರುವ ಅತೀ ಸಾಮಾನ್ಯ ರೋಗಗಳು ಯಾವುದೆಂದರೆ ಮಲೇರಿಯಾ, ಟೈಪಾಯಿಡ್, ನ್ಯೂಮೋನಿಯಾ, ಚಿಕೂನ್ ಗುನ್ಯ ಜ್ವರ,ಡೆಂಗ್ಯೂ ಜ್ವರ, ಹೆಪಟೈಟಿಸ್ ಅಥವಾ ಜಾಂಡಿಸ್, ಸಾಮಾನ್ಯ ವೈರಲ್ ಶೀತ ಜ್ವರ, ಮತ್ತು ಬೇದಿ. ರಸ್ತೆ ಬದಿಯಲ್ಲಿ ಕಲುಷಿತ ಆಹಾರ ಸೇವನೆ, ಅಶುದ್ದವಾದ ನೀರಿನ ಸೇವನೆ ದೇಹದ ಸ್ವಚ್ಚತೆ ಕಾಯ್ದುಕೊಳ್ಳದಿರುವುದು. ಶೌಚದ ಬಳಿಕ ಸರಿಯಾಗಿ ಕೈ ತೊಳೆಯದೆ ಇರುವುದು ಮುಂತಾದ ಕಾರಣಗಳಿಂದ ವೈರಾಣುಗಳು ಬೇಗನೆ ಹರಡುತ್ತದೆ.
ಟೈಪಾಯಿಡ್ ಜ್ವರ (ವಿಷಮಶೀತ ಜ್ವರ)
ಟೈಪಾಯಿಡ್ ಜ್ವರ ಒಂದು ಸಾಂಕ್ರಾಮಿಕ ರೋಗ. ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ರೋಗವನ್ನು ವಿಷಮ ಜ್ವರ, ವಿಷಮಶೀತ ಜ್ವರ ಮತ್ತು ವಾಯಿದೆ ಜ್ವರ ಎಂದೂ ಕರೆಯುತ್ತಾರೆ. ಈ ಜ್ವರ ಬಂದಾಗ ಸಾಮಾನ್ಯವಾಗಿ 3ರಿಂದ 4 ವಾರಗಳ ಕಾಲ ಕಾಡುವುದರಿಂದ ಈ ರೋಗಕ್ಕೆ ವಾಯಿದೆ ಜ್ವರ ಎಂಬ ಅನ್ವರ್ಥನಾಮ ಬಂದಿದೆ. ಪ್ರಪಂಚದಾದ್ಯಂತ ಕಾಣಿಸಿಕೊಳ್ಳುವ ಈ ರೋಗ, ಸಾರ್ವಜನಿಕ ಮತ್ತು ವೈಯುಕ್ತಿಕ ಶುಚಿತ್ವ ಹಾಗೂ ಸ್ವಚ್ಛತೆ ಕಡಮೆ ಇರುವ ಜನಾಂಗಗಳಲ್ಲಿ ಹೆಚ್ಚಾಗಿ ಕಾಣಿಸಿಗುತ್ತದೆ.
ಡೆಂಗ್ಯೂ:
ಇದು ಲಕ್ಷಣರಹಿತವಾದ ಜ್ವರವೂ ಆಗಿರಬಹುದು. ಅಥವಾ ಕೆಲವೊಮ್ಮೆ ದದ್ದು ಮತ್ತು ಕಣ್ಣುಗಳ ಹಿಂದೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಈ ಜ್ವರ ತೀವ್ರತರವಾದ ಪ್ರಕರಣಗಳಲ್ಲಿ ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ಡೆಂಗ್ಯೂ NS1 ಪ್ರತಿಜನಕ ಪರೀಕ್ಷೆ, ಡೆಂಗ್ಯೂ IgM ಪ್ರತಿಕಾಯ, ಡೆಂಗ್ಯೂ IgG ಪ್ರತಿಕಾಯ, ಡೆಂಗ್ಯೂ PCR ಸಂಪೂರ್ಣ ರಕ್ತದ ಎಣಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ ಕೌಂಟ್ ಮೂಲಕ ಡೆಂಗ್ಯೂ ರೋಗನಿರ್ಣಯವನ್ನು ಮಾಡಲಾಗುತ್ತದೆ.
ಇದು ಲಕ್ಷಣರಹಿತವಾದ ಜ್ವರವೂ ಆಗಿರಬಹುದು. ಅಥವಾ ಕೆಲವೊಮ್ಮೆ ದದ್ದು ಮತ್ತು ಕಣ್ಣುಗಳ ಹಿಂದೆ ನೋವು ಕೂಡ ಕಾಣಿಸಿಕೊಳ್ಳುತ್ತದೆ. ಈ ಜ್ವರ ತೀವ್ರತರವಾದ ಪ್ರಕರಣಗಳಲ್ಲಿ ರಕ್ತಸ್ರಾವ ಮತ್ತು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ಡೆಂಗ್ಯೂ NS1 ಪ್ರತಿಜನಕ ಪರೀಕ್ಷೆ, ಡೆಂಗ್ಯೂ IgM ಪ್ರತಿಕಾಯ, ಡೆಂಗ್ಯೂ IgG ಪ್ರತಿಕಾಯ, ಡೆಂಗ್ಯೂ PCR ಸಂಪೂರ್ಣ ರಕ್ತದ ಎಣಿಕೆ ಮತ್ತು ಕಡಿಮೆ ಪ್ಲೇಟ್ಲೆಟ್ ಕೌಂಟ್ ಮೂಲಕ ಡೆಂಗ್ಯೂ ರೋಗನಿರ್ಣಯವನ್ನು ಮಾಡಲಾಗುತ್ತದೆ.
ತಡೆಗಟ್ಟುವಿಕೆ: ಸೊಳ್ಳೆ ನಿವಾರಕಗಳು, ತೋಳುಗಳು ಮತ್ತು ಕಾಲುಗಳನ್ನು ಆವರಿಸುವ ಉದ್ದನೆಯ ತೋಳಿನ ಬಟ್ಟೆಗಳು, ಬೆಡ್ ನೆಟ್ ಮತ್ತು ಕಿಟಕಿ ಪರದೆಗಳನ್ನು ಬಳಸಿ
ಮಲೇರಿಯಾ
ಡೆಂಗ್ಯೂ ಅನ್ನು ಪ್ರಾಯೋಗಿಕವಾಗಿ ಶೀತದ ಜ್ವರದ ಲಕ್ಷಣಗಳಿಂದ ಗುರುತಿಸಲಾಗುತ್ತದೆ. ಆದರೆ, ಪ್ರಯೋಗಾಲಯದಲ್ಲಿ ಮಲೇರಿಯಾಕ್ಕೆ ಬಾಹ್ಯ ರಕ್ತದ ಲೇಪದಿಂದ ರೋಗನಿರ್ಣಯ ಮಾಡಲಾಗುತ್ತದೆ.
ತಡೆಗಟ್ಟುವಿಕೆ: ಸೊಳ್ಳೆ ನಿವಾರಕಗಳು, ತೋಳುಗಳು ಮತ್ತು ಕಾಲುಗಳನ್ನು ಆವರಿಸುವ ಉದ್ದನೆಯ ತೋಳಿನ ಬಟ್ಟೆಗಳು, ಬೆಡ್ ನೆಟ್ಗಳು ಮತ್ತು ಕಿಟಕಿ ಪರದೆಗಳನ್ನು ಬಳಸಿ.
ಚಿಕನ್ ಗುನ್ಯ:
ಚಿಕನ್ಗುನ್ಯಾವು ಕೀಲು ನೋವಿನೊಂದಿಗೆ ಜ್ವರವನ್ನು ತೋರಿಸುತ್ತದೆ. ಚಿಕನ್ಗುನ್ಯ IgM ಪ್ರತಿಕಾಯ ಪರೀಕ್ಷೆ ಮತ್ತು ಚಿಕನ್ಗುನ್ಯಾ ಆರ್ಎನ್ಎ ಪಿಸಿಆರ್ ಪರೀಕ್ಷೆಗಳನ್ನು ಬಳಸಲಾಗುತ್ತದೆ.
ಝಿಕಾ ವೈರಸ್:
ಸೀರಮ್ ಮತ್ತು ಮೂತ್ರದಿಂದ ಝಿಕಾ ವೈರಸ್ PCR, Zika ವೈರಸ್ IgM ಪ್ರತಿಕಾಯ ಪರೀಕ್ಷೆ ಮಾಡಬಹುದು.
ಕಾಲರಾ:
ಅತಿಸಾರ ಭೇದಿ, ನಿರ್ಜಲೀಕರಣ ಸಾಮಾನ್ಯವಾದ ಲಕ್ಷಣವಾಗಿದೆ.
ತಡೆಗಟ್ಟುವಿಕೆ: ಬೇಯಿಸದ ಆಹಾರ ಅಥವಾ ಅನೈರ್ಮಲ್ಯದ ಬೀದಿ ಆಹಾರ ಮತ್ತು ಪಾನೀಯಗಳನ್ನು ತಪ್ಪಿಸಿ ಮತ್ತು ಫಿಲ್ಟರ್ ಮಾಡಿದ ನೀರನ್ನು ಕುಡಿಯಿರಿ.