ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ((Kempegowda International Airport)) ಹೊಸ ಟರ್ಮಿನಲ್ 2ನಲ್ಲಿ ಮಳೆ ನೀರು ಸೋರಿಕೆ ಉಂಟಾಗಿದೆ. ನಿನ್ನೆ ಸಂಜೆ ಸುರಿದ ಭಾರೀ ಮಳೆಗೆ ನೀರು ಸೋರಿಕೆ ಉಂಟಾಗಿದೆ. ಕಳೆದ 2 ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಟರ್ಮಿನಲ್-2 ಉದ್ಘಾಟನೆ ಮಾಡಿದರು. ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ಮಳೆ ನೀರು ಸೋರಿಕೆಯಾಗಿದ್ದು, ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಟರ್ಮಿನಲ್-2 ರಲ್ಲಿ ನೀರು ತುಂಬಿಕೊಂಡಿದೆ.
ಹವಾಮಾನ ವರದಿಗಳು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 25 ಮಿಮೀ ಮಳೆಯನ್ನು ದಾಖಲಿಸಿದರೆ, ವಿಮಾನ ನಿಲ್ದಾಣವು ರಾತ್ರಿ 7 ರಿಂದ 10 ರವರೆಗೆ ಕನಿಷ್ಠ 9.8 ಮಿಮೀ ಮಳೆಯನ್ನು ದಾಖಲಿಸಿದೆ. ಇನ್ನು ಹೊಸ ಟರ್ಮಿನಲ್ನ ಕರ್ಬ್ಸೈಡ್ನಲ್ಲಿ ಸೋರಿಕೆಯಾಗಿರುವುದನ್ನು ವಿಮಾನ ನಿಲ್ದಾಣದ ನಿರ್ವಾಹಕರಾದ ಬೆಂಗಳೂರು ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್ ಖಚಿತಪಡಿಸಿದೆ.