ಕ್ಷುಲಕ ಕಾರಣಕ್ಕಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿ ಎರಡು ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಪಟ್ಟಣದ 22 ನೇ ವಾರ್ಡಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಬಾಗೇಪಲ್ಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಗೇಪಲ್ಲಿ ಪಟ್ಟಣದ 22ನೆ ವಾರ್ಡ್ನ ಕಂಡೆಕ್ಟರ್ – ಬಯ್ಯಣ್ಣ(70) ಹಾಗೂ ಸಂಬಂಧಿ ವೆಂಕಟೇಶ್ (30) ಗಾಯಗೊಂಡಿದ್ದಾರೆ. ಕಂಡೆಕ್ಟರ್ ಬಯ್ಯಣ್ಣ ಮನೆ ಪಕ್ಕದಲ್ಲಿರುವ ಮನೆಗೆ 10 ತಿಂಗಳ ಹಿಂದೆಯಷ್ಟೇ ಯಲ್ಲಂಪಲ್ಲಿ ವೆಂಕಟೇಶ್ ಎಂಬಾತ ಬಾಡಿಗೆ ಬಂದಿದ್ದರು. ದಾರಿ ಮತ್ತು ಚರಂಡಿ ನೀರು ಹರಿಯುವ ವಿಚಾರದಲ್ಲಿ ಇಬ್ಬರ ನಡುವೆ ಹಲವು ದಿನಗಳಿಂದ ಜಗಳ ನಡೆಯುತಿತ್ತಂತೆ. ಶುಕ್ರವಾರ ಬೆಳಗ್ಗೆ ಯಲ್ಲಂಪಲ್ಲಿ ವೆಂಕಟೇಶ್ ಕುಟುಂಸ್ಥರು ಬಿಸಾಡಿರುವ ಕಸ, ಅರಿಶಿಣ,
ಕುಂಕುಮ ಬಯ್ಯಣ್ಣ ಅವರ ಮನೆ ಮುಂಭಾಗ ಬಿದಿದ್ದರಿಂದ ನಮ್ಮ ವಿರುದ್ಧ ವಾಮಾಚಾರ ಮಾಡಿಸಿದ್ದಾರೆಂದು ಅನುಮಾನಗೊಂಡು ಪ್ರಶ್ನಿಸಿದ್ದಾರೆ. ಇದೇ ವಾಚಾರವಾಗಿ ಎರಡು ಕುಟುಂಬದ ನಡುವೆ ಜಗಳ ನಡೆದಿದ್ದು, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಯಲ್ಲಂಪಲ್ಲಿ ವೆಂಕಟೇಶ್ ಹಾಗೂ ಹಾಗೂ ಅವರ ಸಂಬಂಧಿಕರಾದ ಪ್ರದೀಪ್, ಶೋಭಾ, ಯಲ್ಲಂಪಲ್ಲಿ ಗ್ರಾಮದ ಗಂಗಾಧರಪ್ಪ ವಿರುದ್ಧ ಗಾಯಾಳು ಬಯ್ಯಣ್ಣ ಬಾಗೇಪಲ್ಲಿ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಘಟನೆ ಸಂಬಂಧ ಬಾಗೇಪಲ್ಲಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.