ಬೀದರ್: ಗೋ ಹತ್ಯೆ(Killing Go) ತಡೆಯಲು ಹೋದಾಗ ಅನ್ಯ ಕೋಮಿನ ವ್ಯಕ್ತಿ ಜೊತೆ ಕಿರಿಕ್ ವಿಚಾರವಾಗಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮನೆಯ ಮಾಲೀಕನ ಮಗ ಮೇಹರಾಜ್ ಇನಾಮುಲ್ಲಾಖಾನ್(Mehraj Inamullah Khan) ಅವರು ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ದೂರು ನೀಡಿದ್ದು ದೂರಿನ್ವಯ ಬಸವಕಲ್ಯಾಣ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಕ್ರೀದ್ ಹಬ್ಬದಂದು ಕುರ್ಬಾನಿ ಕೊಡುತ್ತಿದ್ದಾಗ ಮನೆಗೆ ಬಂದು ಶಾಸಕರು ಮತ್ತು ಅವರ ಬೆಂಬಲಿಗರು ಧಮ್ಮಿ ಹಾಕಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ.
ಶಾಸಕ ಶರಣು ಸಲಗರ್ ಹಾಗೂ ಅವರ ಜೊತೆ ಬಂದಿದ್ದ 15-25 ಜನರು ನಮ್ಮ ಮನೆಯ ಬಳಿ ಬಂದು ಕಿರುಚಾಡಿದ್ದು ಅದು ಹೇಗೆ ಕುರ್ಬಾನಿ ಕೊಡುತ್ತೀರಿ ನೋಡೋಣ, ಕಲ್ಯಾಣದಲ್ಲಿ ನಿಮ್ಮದು ಜಾಸ್ತಿಯಾಗಿದ್ದು ನಾವು ಏನು ಎಂದು ತೋರಿಸುತ್ತೇವೆ ಎಂದು ನಮ್ಮ ಹಾಗೂ ನಮ್ಮ ತಂದೆಗೆ ಶಾಸಕರು ಧಮ್ಕಿ ಹಾಕಿದ್ದಾರೆ ಎಂದು ದೂರು ಸಲಿಸಿದ.ಮೇಹರಾಜ್ ಇನಾಮುಲ್ಲಾಖಾನ್ ಬಸವಕಲ್ಯಾಣ ನಗರ ಠಾಣೆ ಯಲ್ಲಿ ದೂರು ದಾಖಲು ಮಾಡಿದ್ದಾರೆ.