ತಮಿಳು ಚಿತ್ರರಂಗದ ಪೋಷಕ ನಟಿ ಶರಣ್ಯ ಪೊನ್ವಣ್ಣನ್ ವಿರುದ್ಧ ದೂರು ದಾಖಲಾಗಿದೆ. ತನ್ನ ಅಭಿನಯದ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನ ಗೆದ್ದಿರುವ ನಟಿ ಇದೀಗ ಚಿಕ್ಕ ವಿಷಯಕ್ಕೆ ಕಿರಿಕ್ ಮಾಡಿಕೊಂಡಿದ್ದು ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ಸ್ಥಿತಿ ನಿರ್ಮಾಣವಾಗಿದೆ.
ನಟಿ ಶರಣ್ಯ ಪೊನ್ವಣ್ಣನ್ ಅವರ ಪಕ್ಕದ ಮನೆಯಲ್ಲಿ ಶ್ರೀದೇವಿ ಎಂಬ ಮಹಿಳೆ ವಾಸವಾಗಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ಶರಣ್ಯ ಮತ್ತು ಶ್ರೀದೇವಿ ನಡುವೆ ಜಗಳ ನಡೆದಿದೆ. ‘ಶರಣ್ಯ, ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ಶ್ರೀದೇವಿ ಆರೋಪಿಸಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೆ ಸಾಕ್ಷಿಯಾಗಿ ಸಿಸಿಟಿವಿ ಫೂಟೇಜ್ಗಳನ್ನು ನೀಡಿದ್ದಾರೆ.
ಶರಣ್ಯ ಪತಿ ಪೊನ್ವಣ್ಣನ್ ಕೂಡ ಸಿನಿಮಾ ನಟರಾಗಿದ್ದು, ದಂಪತಿ ಚೆನ್ನೈನ ವಿರುಗಂಬಕ್ಕಂನಲ್ಲಿ ವಾಸವಾಗಿದೆ. ಸದಾ ಉತ್ತಮ ಪಾತ್ರಗಳನ್ನು ಮಾಡುವ ಶರಣ್ಯ ಸಣ್ಣ ಪಾರ್ಕಿಂಗ್ ವಿಚಾರಕ್ಕೆ ಈ ರೀತಿ ಜಗಳ ಮಾಡಿದ್ದಾರಾ ಎಂದು ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ. ಸದ್ಯ ಪ್ರಕರಣದ ದಾಖಲಿಸಿಕೊಂಡಿರೋ ಪೊಲೀಸರು ನಟಿಯ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.