ಮಂಡ್ಯ: ಕೊನೆಗೂ ಮಂಡ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆಯಾದ ಮನ್ಮುಲ್ ಹೈಡ್ರಾಮಾಕ್ಕೆ(Manmul Hydrama) ತೆರೆಬಿದಿದೆ. ಅಧ್ಯಕ್ಷ ಸ್ಥಾನವನ್ನು ತನ್ನ ತೆಕ್ಕೆಗೆ ತಗೋಳ್ಳೋದ್ರಲ್ಲಿ ಕಾಂಗ್ರೆಸ್ ಸಕ್ಸಸ್ ಆಗಿದ್ದು, ರಾಜ್ಯ ಮಟ್ಟದಲ್ಲಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ(BJP JDS Alignment) ಆಗ್ತಿದ್ರೆ, ಮನ್ ಮುಲ್ ನಲ್ಲಿ ಬಿಜೆಪಿ ಬೆಂಬಲಿತ ಸದಸ್ಯ ಕಾಂಗ್ರೆಸ್ ಗೆ ಸಪೋರ್ಟ್ ಮಾಡೋ ಮೂಲಕ ಠಕ್ಕರ್ ಕೊಟ್ರು. ಒಂದೆಡೆ ಜೆಡಿಎಸ್ ಇಬ್ಬರು ಸದಸ್ಯರನ್ನ ಅನರ್ಹಗೊಳಿಸಿದ್ದಕ್ಕೆ ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದ್ರು. ಈ ಕುರಿತು ಒಂದು ಕಂಪ್ಲೀಟ್ ರಿಪೋಟ್ ಇಲ್ಲಿದೆ ನೋಡಿ.
ಹೌದು ಇಂದು ನಡೆದ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡೀತು. ಜೆಡಿಎಸ್ 6, ಕಾಂಗ್ರೆಸ್ 2, ಬಿಜೆಪಿ 2, ಒಬ್ಬರು ನಾಮಿನಿ ನಿರ್ದೇಶಕರು ಹಾಗೂ ನಾಲ್ವರೈ ಅಧಿಕಾರಿಗಳು ಸೇರಿ ಒಟ್ಟು 17 ಮತಗಳಿರುವ ಮನ್ ಮುಲ್ ಆಡಳಿತ ಮಂಡಳಿಯಲ್ಲಿ ಕೇವಲ 4 ಚುನಾಯಿತ ಸದಸ್ಯರಿರುವ ಕಾಂಗ್ರೆಸ್ ಅಧಿಕಾರವನ್ನ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಯ್ತು. ಕಾಂಗ್ರೆಸ್ ನ ಬೋರೇಗೌಡ 9ಮತಗಳನ್ನ ಪಡೆಯುವ ಮೂಲಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಚುನಾವಣೆಗೆ ಕೆಲವು ಗಂಟೆ ಭಾಕಿ ಇರುವಾಗ ಜೆಡಿಎಸ್ ನಿರ್ದೇಶಕರಾದ ವಿಶ್ವನಾಥ್ ಹಾಗೂ ರಾಮಚಂದ್ರು ಅವರನ್ನ ಅನರ್ಹಗೊಳಿಸಲಾಯಿತು.
ಹೀಗಾಗಿ ಜೆಡಿಎಸ್ ಹಾಗೂ ಬಿಜೆಪಿ ನಿರ್ದೇಶಕರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯಲು ನಿರ್ಧರಿಸಿದ್ರು. ಆಗ ಕೋರಂ ಕೊರತೆಯಿಂದ ಚುನಾವಣೆ ಮುಂದಾಡಲಾಗುತ್ತೆ ಅಂತ ಅಂದಾಜಿಸಲಾಗಿತ್ತು. ಆದ್ರೆ ಬಿಜೆಪಿಯ ಎಸ್.ಪಿ.ಸ್ವಾಮಿ ಕೊನೆ ಕ್ಷಣದಲ್ಲಿ ಮತದಾನ ಪ್ರಕ್ರಿಯೆಗೆ ಭಾಗಿಯಾಗಿದ್ರಿಂದ ಮತದಾನ ಪ್ರಕ್ರಿಯೆ ಆರಂಭವಾಯಿತು. ಉಳಿದಂತೆ ಮೂವರು ಅಧಿಕಾರಿಗಳು, ಓರ್ವ ನಾಮಿನಿ ನಿರ್ದೇಶಕ ಹಾಗೂ ಕಾಂಗ್ರೆಸ್ ನ 4 ಚುನಾಯಿತ ನಿರ್ದೇಶಕರು ಸೇರಿ 9 ಮತಗಳನ್ನ ಬೋರೇಗೌಡ್ರು ಪಡೆದು ಗೆಲುವಿನ ನಗೆ ಬೀರಿದ್ರು.
ಈ ಮಧ್ಯೆ ಜೆಡಿಎಸ್ ನ ರಾಮಚಂದ್ರು ಹಾಗೂ ವಿಶ್ವನಾಥ್ ಅವರನ್ನ ಅನರ್ಹತೆ ಮಾಡಿರೋದನ್ನ ಖಂಡಿಸಿ ಜೆಡಿಎಸ್ ನಿರ್ದೇಶಕರು ಮಂಡ್ಯದ ಸಹಕಾರ ಸಂಘಗಳ ಸಹಕಾರಿ ನಿಬಂಧಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರಲ್ಲದೆ ಕಾಂಗ್ರೆಸ್ ಅಧಿಕಾರ ಹಿಡಿಯಲು ವಾಮ ಮಾರ್ಗ ಅನುಸರಿಸಿ ನಮಗೆ ಕಾನೂನು ಬಾಹಿರವಾಗಿ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು. ಈ ವೇಳೆ ಕಚೇರಿಗೆ ನುಗ್ಗುವ ಪ್ರಯತ್ನಕ್ಕೆ ಮುಂದಾದಾಗ ಪೊಲೀಸರು ತಡೆದ್ರು. ಈ ವೇಳೆ ವಾಗ್ವಾದವೂ ನಡೆಯಿತು.
ಒಟ್ನಲ್ಲಿ ಕಾಂಗ್ರೆಸ್ ಹಾಕಿದ ಗೇಮ್ ಪ್ಲಾನ್ ವರ್ಕೌಟ್ ಆಗಿದ್ದು, ಮನ್ಮುಲ್ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್ ನ ರಾಜ್ಯ ನಾಯಕರು ಕಾಂಗ್ರೆಸ್ ಮೇಲೆ ಕೆಂಡ ಕಾರುತ್ತಿದ್ದಾರೆ. ಆದ್ರೆ ಇಲ್ಲಿ ಬಿಜೆಪಿಯ ಓರ್ವ ಸದಸ್ಯ ಸದ್ದಿಲ್ಲದೆ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದಂತು ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದೆ. ಅಲ್ಲದೇ, ಮನ್ ಮುಲ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸೋ ಮೂಲಕ ರಾಜ್ಯ ಮಟ್ಟದಲ್ಲಿ ನಡೀತ್ತಿರೋ ಬಿಜೆಪಿ-ಜೆಡಿಎಸ್ನ ಹೊಂದಾಣಿಕೆ ರಾಜಕೀಯಕ್ಕೆ ಮಂಡ್ಯ ಬಿಜೆಪಿ ಲೀಡರ್ ನೇರವಾಗಿಯೇ ತಮ್ಮ ವಿರೋಧ ವ್ಯಕ್ತಪಡಿಸಿದ್ದಂತೂ ಸುಳ್ಳಲ್ಲ.