ಕೊನೆಗೂ ಜನರ ಬಳಕೆಗೆ ʼನಮ್ಮ ಬಿಎಂಟಿಸಿʼ ಮೊಬೈಲ್ ಆಯಪ್ ಬಿಡುಗಡೆ ಮಾಡಲಾಗಿದೆ. ವರ್ಷಗಳಿಂದ ನನೆಗುದಿಯಲ್ಲಿದ್ದ ಬಿಎಂಟಿಸಿ ಬಸ್ ಟ್ರ್ಯಾಕಿಂಗ್ ಆಯಪ್ ʼನಮ್ಮ ಬಿಎಂಟಿಸಿ ಆ್ಯಪ್ ಬಿಡುಗಡೆ ಆಗಿದ್ದು, ಪ್ಲೇ ಸ್ಟೋರ್ನಲ್ಲಿ ಈ ಆಯಪ್ ಡೌನ್ಲೋಡ್ ಮಾಡಿಕೊಳ್ಳಲು ಲಭ್ಯವಿದೆ. ʼನಮ್ಮ ಬಿಎಂಟಿಸಿʼ ಆಯಪ್ ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು, ಬಳಕೆದಾರರಿಗೆ ನೈಜ ಸಮಯದಲ್ಲಿ ಬಿಎಂಟಿಸಿ ಬಸ್ ಟ್ರ್ಯಾಕ್ ಮಾಡಲು ಸಹಾಯವಾಗಲಿದೆ. ಪ್ರಯಾಣವನ್ನು ತೊಂದರೆಯಿಂದ ಮುಕ್ತವಾಗಿಸಲು ಇತರ ಆಯ್ಕೆಗಳಿವೆ. ಬಸ್ ದರದ ವಿವರಗಳು,
ಮಾರ್ಗಗಳು ಮತ್ತು ವೇಳಾಪಟ್ಟಿ ಲಭ್ಯವಿರಲಿವೆ. 400 ವೋಲ್ವೋ ಬಸ್ಗಳು ಸೇರಿ ದಿನ ಸುಮಾರು 5,600 ಬಸ್ಗಳನ್ನು ನಿರ್ವಹಿಸುತ್ತದೆ. ಮುಂಬರುವ ತಿಂಗಳುಗಳಲ್ಲಿ ಸ್ಕ್ರ್ಯಾಪ್ ಆಗಲಿರುವ ಬಸ್ಗಳಲ್ಲಿ ಲೈವ್ ಟ್ರ್ಯಾಕಿಂಗ್ ಲಭ್ಯವಿರುವುದಿಲ್ಲ. ʼನಮ್ಮ ಬಿಎಂಟಿಸಿ’ ಆಯಪ್ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಲಭ್ಯವಿದೆ. ಭಾಷೆ ಬದಲಾಯಿಸಲು ಸರಳವಾದ ಆಯ್ಕೆಯನ್ನೂ ನೀಡಲಾಗಿದೆ. ಸೈನ್ ಇನ್ ಮಾಡುವ ಮೂಲಕ ಅಥವಾ ಗೆಸ್ಟ್ ಯೂಸರ್ ಆಗಿಯೂ ಬಳಸಬಹುದು. ಬಿಎಂಟಿಸಿ ಸಹಾಯವಾಣಿಗಳಿಗೆ ಸಂಪರ್ಕಿಸಲು ಆಯಪ್ನಲ್ಲಿ ಲಿಂಕ್ ಸಹ ನೀಡಲಾಗಿದೆ. ಇಷ್ಟೆಲ್ಲಾ ವಿಶೇಷತೆಗಳನ್ನು ನಮ್ಮ ಬಿಎಂಟಿಸಿ ಆ್ಯಪ್ ನಲ್ಲಿ ನೀಡಲಾಗಿದೆ.