ವಾಷಿಂಗ್ಟನ್: ಒಂಟಿ ಜೀವನ ಬೇಸರವಾಗಿದ್ದು, ಮದುವೆಯಾಗ್ಬೇಕು ಅಂತಾ ಅನ್ನಿಸಿದೆ, ಹುಡುಗನನ್ನ ಹುಡುಕಿ ಕೊಡಿ ಪ್ಲೀಸ್. ನನಗೆ ಬೇಕಾದಂತಹ ಹುಡುಗನನ್ನ ಹುಡುಕಿ ಕೊಟ್ರೆ 5 ಸಾವಿರ ಡಾಲರ್ (4.10 ಲಕ್ಷ ರೂ.) ಬಹುಮಾನ ಕೊಡ್ತೀನಿ ಎಂದು ಅಮೆರಿಕದ ಮಹಿಳೆಯೊಬ್ಬರ ಬಂಪರ್ ಆಫರ್ ನೀಡಿದ್ದಾರೆ.
ಒಂಟಿ ಜೀವನದಿಂದ ಬೇಸರಗೊಂಡಿರುವ ಲಾಸ್ ಏಂಜಲೀಸ್ನ ಈವ್ ಟಿಲ್ಲಿ-ಕೊಲ್ಸನ್ (35) ಮಹಿಳೆ ದಾಂಪತ್ಯ ಜೀವನಕ್ಕೆ ಕಾಲಿಡಲು ಕಾತುರರಾಗಿದ್ದಾರೆ. 10 ಲಕ್ಷ ಫಾಲೋವರ್ಸ್ಗಳನ್ನು ಹೊಂದಿರುವ ಕೋಲ್ಸನ್ ತನಗೆ ಹುಡುಗನನ್ನ ಹುಡುಕಿಕೊಡುವಂತೆ ಇನ್ಸ್ಟಾಗ್ರಾಮ್ನಲ್ಲಿ ವೀಡಿಯೋ ಮೂಲಕವೂ ಹುಡುಗನನ್ನ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.
ಟಿಲ್ಲಿ-ಕೊಲ್ಸನ್ ಈ ಹಿಂದೆ ತಮ್ಮ ಸ್ನೇಹಿತರಲ್ಲೇ ಒಬ್ಬರನ್ನ ಅಥವಾ ತಾನು ಕೆಲಸ ಮಾಡುವ ಕಂಪನಿಯ ಬಾಸ್ ಅವರನ್ನೇ ಮದುವೆಯಾಗುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಸಾರ್ವಜನಿಕ ಜೀವನಕ್ಕೆ ತೆರೆದುಕೊಂಡಿದ್ದಾರೆ.
ನನಗೆ ನನ್ನ ಗಂಡನಾಗುವನನ್ನ ಪರಿಚಯಿಸಿದ್ರೆ, ನಾನು ಅವನನ್ನು ಮದುವೆಯಾದ್ರೆ ಹುಡುಕಿ ಕೊಟ್ಟವರಿಗೆ 5 ಸಾವಿರ ಡಾಲರ್ ಕೊಡುತ್ತೇನೆ. ಆದ್ರೆ ನಾನು ಅವನೊಂದಿಗೆ ಹೆಚ್ಚುಕಾಲ ಇರುವುದು ಅನುಮಾನ. 20 ವರ್ಷಗಳಲ್ಲಿ ವಿಚ್ಛೇದನ ನೀಡಬಹುದು. ಸದ್ಯಕ್ಕೆ ಒಬ್ಬ ಹುಡ್ಗನನ್ನ ಹುಡುಕಿಕೊಟ್ಟರೆ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ.
ಒಂಟಿ ಜೀವನದಿಂದ ಬೇಸತ್ತಿದ್ದ ಕೋಲ್ಸನ್ ಡೇಟಿಂಗ್ನಿಂದ ಬೇಸರಗೊಂಡಿದ್ದರು. ಡೇಟಿಂಗ್ ಆ್ಯಪ್ ನಲ್ಲಿ ಹುಡುಕಾಡಿದ್ರೂ ಒಬ್ಬ ಹುಡುಗನೂ ಸಿಕ್ಕಿರಲಿಲ್ಲ. ಹಾಗಾಗಿ ಡೇಟಿಂಗ್ ಸಂಸ್ಕೃತಿಗೆ ಗುಡ್ಬೈ ಹೇಳಿ, ತನ್ನ ಅಗತ್ಯತೆಗಳನ್ನು ಪೂರೈಸಲು ಸಿದ್ಧವಿರುವ ವ್ಯಕ್ತಿಯನ್ನ ಗಂಡನಾಗಿ ಹುಡುಕಿಕೊಡಿ ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಸಾಕಷ್ಟು ಮಂದಿ ಈಗಾಗಲೇ ಕೋಲ್ಸನ್ ಅವರಿಗೆ ಸೂಕ್ತವಾದ ವರನನ್ನು ಹುಡುಕುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.