ಬೆಂಗಳೂರು: ಕರ್ನಾಟಕ ಭೂಮಿ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಕರ್ನಾಟಕ ಸರ್ಕಾರದ ಒಂದು ಉಪಕ್ರಮವಾಗಿದ್ದು, ಅವುಗಳನ್ನು ನಿವಾಸಿಗಳಿಗೆ ಹೆಚ್ಚು ಪ್ರವೇಶಿಸಬಹುದಾಗಿದೆ. 2000 ರಲ್ಲಿ ಉದ್ಘಾಟನೆಗೊಂಡ ಈ ಯೋಜನೆಯು ಭೂ ದಾಖಲೆಗಳ ನಿರ್ವಹಣಾ ವ್ಯವಸ್ಥೆಯಾಗಿದ್ದು, ಡೇಟಾ ಎಂಟ್ರಿ ಸಮಯದಲ್ಲಿ ಚಾಲ್ತಿಯಲ್ಲಿರುವ ಎಲ್ಲಾ ಕೈಪಿಡಿ RTC ಗಳನ್ನು ಡಿಜಿಟಲೀಕರಿಸಲಾಗಿದೆ.
ಹೌದು ಮನೆಯಲ್ಲಿಯೇ ಕುಳಿತು, ಕೇವಲ ಒಂದೇ ನಿಮಿಷದಲ್ಲಿ ಜಮೀನಿನ ಮೇಲೆ ಸಾಲವಿದೆಯೋ ಇಲ್ಲವೋ ಎಂಬುದನ್ನುಚೆಕ್ ಮಾಡಬಹುದು.
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ
https://landrecords.karnataka.gov.in/Service2/
ಕಂದದಾಯ ಇಲಾಖೆಯ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ಸ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಂಡು ನಿಮ್ಮ ಯಾವ ಸರ್ವೆ ನಂಬರ್ ಮೇಲೆ ಸಾಲವಿದೆ ಎಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಹಾಕಬೇಕು.
ನಂತರ ಗೋ ಮೋಲೆ ಕ್ಲಿಕ್ ಮಾಡಬೇಕಾಗುತ್ತದೆ. ಇದಾದನಂತರ ಸರ್ನೋಕ್ ನಲ್ಲಿ ಸ್ಟಾರ್, ಹಾಗೂ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಪಿರಿಯಡ್ ಮೇಲೆ ರೈತರು 2022-2023 ಆಯ್ಕೆ ಮಾಡಿಕೊಳ್ಳಬೇಕು. ಇಯರ್ ನಲ್ಲಿ 2022-2023 ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೇಲೆ ಕ್ಲಿಕ್ ಮಾಡಬೇಕು.
ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ರೈತರು ಬರುತ್ತಾರೆ. ಅ ಜಮೀನಿನ ಮಾಲಿಕರ ಹೆಸರುಹಾಗೂ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಹಾಗೂ ಅವರ ಜಮೀನಿನ ಖಾತಾ ನಂಬರ್ ಕಾಣಿಸುತ್ತದ. ಅದರ ಮುಂದುಗಡೆ ಕಾಣಿಸುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ಸರ್ವೆ ನಂಬರ್ ಹಾಗೂ ಆ ಸರ್ವೆ ನಂಬರ್ ಅಡಿಯಲ್ಲಿ ಒಟ್ಟು ಎಷ್ಟು ಎಕರೆ ಜಮೀನಿದೆ? ಎಂಬ ಮಾಹಿತಿಯೊಂದಿಗೆ ಜಮೀನು ಸ್ವಾಧೀನದಾರ ಹೆಸರು ಹಾಗೂ ತಂದೆಯ ಹೆಸರು ಮತ್ತು ಅವರ ಹೆಸರಿಗಿರುವ ಜಮೀನು ಮತ್ತು ಖಾತಾ ನಂಬರ್ ನೊಂದಿಗೆ ಅವರ ಹೆಸರಿಗೆ ಜಮೀನು ಯಾವಾಗ ವರ್ಗಾವಣೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಜಮೀನಿನ ಮಾಲಿಕರು ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆ ಹಾಗೂ ಯಾವಾಗಾ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಕಾಣಿಸುತ್ತದೆ.
ನೀವು ಒಂದು ವೇಳೆ ಸಾಲ ಮರುಪಾವತಿಸಿದ್ದರೂ ಇನ್ನೂಜಮೀನಿನ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ, ಕೂಡಲೇ ನೀವು ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದೀರೋ ಆ ಬ್ಯಾಂಕಿಗೆ ಹೋಗಿ ಈ ಕುರಿತು ಬ್ಯಾಂಕ್ ಮ್ಯಾನೇಜರ್ ಗೆ ತಿಳಿಸಬೇಕು. ಆಗ ಬ್ಯಾಂಕಿನ ಮ್ಯಾನೇಜರ್ ಪಹಣಿಯಲ್ಲಿ ಕಾಣಿಸುವ ಸಾಲ ತೆಗೆದುಹಾಕುತ್ತಾರೆ.