ಬೆಂಗಳೂರು: ರಾಜ್ಯದಲ್ಲೇ ಭಾರೀ ಸಂಚಲನ ಸೃಷ್ಟಿಸಿದ್ದ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಕೇಸ್ ಬಗ್ಗೆ ಬೆಳಗಾವಿಯ ವಿಧಾನಪರಿಷತ್ ಅಧಿವೇಶನದಲ್ಲಿ ಟಿ.ಎ.ಶರವಣ ಅವರು ಇದರ ಬಗ್ಗೆ ಪ್ರಸ್ತಾಪಿಸಿದ್ದಾರೆ. ಹಾಗೆ ಇದರ ಬಗ್ಗೆ ಸರ್ಕಾರ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಹಾಗೆ ಇದಕ್ಕೊಂದು ಶಾಶ್ವತ ಪರಿಹಾರ ನೀಡಲೇಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ
ಪರಿಷತ್ ಮಾತನಾಡಿದ ಟಿಎ ಶರವಣ ಅವರು, ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ಕುರಿತಾಗಿ ಸದನದಲ್ಲಿ ಸರ್ಕಾರದ ಗಮನವನ್ನು ಸೆಳೆದರು. ಹಾಗೆ ಭ್ರೂಣ ಹತ್ಯೆಯಿಂದ ದೇಶದಲ್ಲಿ ಲಿಂಗಾನುಪಾತ 979ರಿಂದ 947ಕ್ಕೆ ಕುಸಿದಿದೆ. ಜನರೂ ಭ್ರೂಣ ಹತ್ಯೆಯನ್ನು ಬಯಸುತ್ತಿದ್ದಾರೆ. ಅದಕ್ಕಾಗಿಯೇ ಅಕ್ರಮ ಸೆಂಟರ್ಗಳು, ಕೃತ್ಯಗಳು ಹೆಚ್ಚಾಗುತ್ತಿವೆ. ಈ ಕುರಿತು ಜನಜಾಗೃತಿ ಹೆಚ್ಚಾಗಬೇಕು, ಜೊತೆಗೆ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭ್ರೂಣ ಹತ್ಯೆ ಮಾಡಿಸಿದವರು ಹಾಗೂ ಮಾಡಿದವರು ಸೇರಿ ಎರಡು ಕಡೆಯವರನ್ನು ಹೊಣೆ ಮಾಡಬೇಕು. ಭ್ರೂಣ ಹತ್ಯೆ ಎಂದರೆ ಅದು ಕೊಲೆಯೇ ಆಗಿದೆ ಎಂದರು.
ಇದನ್ನು ತಡೆಯಲು ಕಾನೂನು ಜಾರಿಗೆ ತರಬೇಕು. ಭ್ರೂಣ ಲಿಂಗ ಪತ್ತೆ ಕಾನೂನನ್ನು ಮತ್ತಷ್ಟು ಕಠಿಣಗೊಳಿಸಿ, ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು. ಭ್ರೂಣ ಪತ್ತೆ ಪ್ರತ್ಯೇಕ ಕಾನೂನು ಇದೆ. ಭ್ರೂಣ ಹತ್ಯೆ ತಡೆಯಲು ಚಾಲ್ತಿಯಲ್ಲಿರುವ ಕಾನೂನು ಸಮರ್ಥವಾಗಿಲ್ಲ. ಪ್ರಸ್ತುತ ಐಪಿಸಿ ಸೆಕ್ಷನ್ ಸೆಕ್ಷನ್ 315, 316, ಬಳಸಿಕೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಐಪಿಸಿಗೂ ತಿದ್ದುಪಡಿ ತರಲಾಗುವುದು. ಬಯ್ಯಪ್ಪನಹಳ್ಳಿ ಪ್ರಕರಣದಲ್ಲಿ ದಾಖಲಿಸಲಾಗಿದ್ದ ಸೆಕ್ಷನ್ಗಳನ್ನೇ ಆಧಾರವಾಗಿಟ್ಟುಕೊಂಡು ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ ಎಂದರು..
ಹಾಗೆ ಈ ರೀತಿಯ ಯಾವ ಅಮಾನವೀಯ ಘಟನೆಗಳು ಸಂಭವಿಸದಂತೆ ಸೂಕ್ತ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ಹಾಗೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು ಎಂದು ಪರಿಷತ್ ಸದಸ್ಯ ಟಿ.ಎ.ಶರವಣ ಮನವಿ ಸಲ್ಲಿಸಿದರು.