ಬೆಂಗಳೂರು: ನ್ಯಾಯಾಲಯದ ಸೂಚನೆ ಮೇರೆಗೆ ಬೆಂಗಳೂರಿನ ಪುಲಿಕೇಶಿನಗರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ವಿರುದ್ಧ FIR ದಾಖಲಾಗಿದೆ. ಇನ್ಸ್ಪೆಕ್ಟರ್ ಕಿರಣ್ ಅವರ ವಿರುದ್ಧ ಎಫ್ಐಆರ್ ದಾಖಲಾಗಿರುವುದು ತಿಳಿದು ಬಂದಿದೆ. ಹರೀಶ್ ಫರ್ನಾಂಡೀಸ್ ಎಂಬುವರು ಇನ್ಸ್ಪೆಕ್ಟರ್ ಕಿರಣ್ ಅವರು ವಾರೆಂಟ್ ಇಲ್ಲದೆ ಮನೆಗೆ ಪ್ರವೇಶಿಸಿ ಗಲಾಟೆ ಮಾಡಿದ್ದಾರೆ ಎಂದು 2016ರಲ್ಲಿ ನ್ಯಾಯಾಲಯಕ್ಕೆ ಪಿಸಿಆರ್ ಸಲ್ಲಿದ್ದರು.
ಈ ಹಿನ್ನೆಲೆ ಕೋರ್ಟ್ ಸೂಚನೆ ಮೇರೆಗೆ FIR ದಾಖಲಾಗಿದೆ. ಬೆಂಗಳೂರಿನ ಅಶೋಕನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹೋದರರಾದ ಹರೀಶ್ ಫರ್ನಾಂಡೀಸ್ ಮತ್ತು ವಸಂತ್ ಫರ್ನಾಂಡೀಸ್ ಎಂಬವರ ನಡುವೆ 2016ರಲ್ಲಿ ಮನೆ ಖಾಲಿ ಮಾಡುವ ವಿಚಾರಕ್ಕೆ ಜಗಳ ನಡೆದಿತ್ತು.
ಈ ಗಲಾಟೆಯಲ್ಲಿ ಇನ್ಸ್ಪೆಕ್ಟರ್ ಕಿರಣ್ ಮಧ್ಯಪ್ರವೇಶಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ 2023ರ ಮೇ 19ರಂದು ಆಶೋಕ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ