ಬೆಂಗಳೂರು ;- ಸಂಸದ ತೇಜಸ್ವಿ ಸೂರ್ಯ ಅಧಿಕೃತ ಫೋನ್ ಸಂಖ್ಯೆ ದುರ್ಬಳಕೆ ಮಾಡಿಕೊಂಡ ಆರೋಪದಡಿ ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಜುಲೈ 1 ರಂದು ತೇಜಸ್ವಿ ಸೂರ್ಯ ಅವರ ಅಧಿಕೃತ ಫೋನ್ ಸಂಖ್ಯೆಯಿಂದ ಆರೋಪಿಯು, ಗುಜರಾತ್ ಘಟಕದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಪ್ರಶಾಂತ್ ಕೋರಟ್ ಅವರಿಗೆ ಕರೆ ಮಾಡಿ ಹಣ ಮತ್ತು ವಜ್ರಕ್ಕೆ ಬೇಡಿಕೆಯಿಟ್ಟಿದ್ದರು.
ಬಳಿಕ ಪ್ರಶಾಂತ್ ಕೋರಟ್ ಅವರು ಖಚಿತತೆಗಾಗಿ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿದಾಗ ಪ್ರಕರಣ ಬಯಲಾಗಿದೆ. ಈ ಸಂಬಂಧ ತೇಜಸ್ವಿ ಸೂರ್ಯ ಪಿಎ ಜುಲೈ 4 ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ದೂರು ದಾಖಲಾಗಿದೆ.