ಕೇರಳ:- ಕುವೈತ್ನ ಅಬ್ಬಾಸಿಯಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕೇರಳದ ಅಲಪ್ಪುಳ ಮೂಲದ ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಜರುಗಿದೆ.
ಮುಳಕಲ್ (40), ಅವರ ಪತ್ನಿ ಲಿನಿ ಅಬ್ರಹಾಂ (35) ಮತ್ತು ಅವರ ಮಕ್ಕಳಾದ ಐರಿನ್ (14) ಮತ್ತು ಇಸಾಕ್ (9) ಮೃತ ದುರ್ದೈವಿಗಳು.
ಮ್ಯಾಥ್ಯೂ ಅವರು ಉದ್ಯೋಗಕ್ಕಾಗಿ ಕುವೈತ್ನ ಅಬ್ಬಾಸಿಯಾದಲ್ಲಿ ಕಳೆದ 15 ವರ್ಷಗಳಿಂದ ಕುಟುಂಬದೊಂದಿಗೆ ನೆಲೆಸಿದ್ದರು. ಲಿನಿ ಆರೋಗ್ಯ ಸಚಿವಾಲಯದ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಐರಿನ್ ಮತ್ತು ಇಸಾಕ್ 9 ಮತ್ತು 4 ನೇ ತರಗತಿಯಲ್ಲಿ ಓದುತ್ತಿದ್ದರು. ಶುಕ್ರವಾರ ರಾತ್ರಿ ಅವರು ಮಲಗುವ ಕೋಣೆಯಲ್ಲಿದ್ದ ಎ.ಸಿ ಯಂತ್ರದ ಶಾರ್ಟ್ ಸರ್ಕ್ಯೂಟ್ನಿಂದಾಗಿ ಮನೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಇದರಿಂದ ಇಡೀ ಕುಟುಂಬ ಸಜೀವ ದಹನವಾಗಿದೆ
ಕೇರಳದ ಕೊಚ್ಚಿ ಬಳಿಯ ನೆಡುಂಬಸ್ಸರಿ ಮೂಲದವರಾದ ಮ್ಯಾಥ್ಯೂ ಮುಜಾಕಲ್ ತಾಯಿ ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಕಳೆದ ಗುರುವಾರವಷ್ಟೇ ಅವರು ತಮ್ಮ ಮಕ್ಕಳು ಹಾಗೂ ಪತ್ನಿ ಜೊತೆ ರಜೆ ಮುಗಿಸಿಕೊಂಡು ಕುವೈತ್ಗೆ ತೆರಳಿದ್ದರು. ಶುಕ್ರವಾರ ಅಗ್ನಿ ದುರಂತ ಸಂಭವಿಸಿದೆ. ಮ್ಯಾಥ್ಯೂ ಕೇರಳದಿಂದ ಕುವೈತ್ನ ಮನೆ ಬಂದ ಬಳಿಕ ತಾಯಿಗೆ ಕರೆ ಮಾಡಿ ನಾವು ಸುರಕ್ಷಿತವಾಗಿ ಮನೆ ತಲುಪಿದ್ದೇವೆ. ದಣಿದಿರುವುದರಿಂದ ವಿಶ್ರಾಂತಿ ಪಡೆಯಬೇಕೆಂದು ಹೇಳಿ ಮಲಗಿದ್ದರು. ಈ ವೇಳೆ ಘಟನೆ ಸಂಭವಿಸಿದೆ.