ಗುಜರಾತ್:- ಇಲ್ಲಿನ ರಾಜ್ಕೋಟ್ ಅಗ್ನಿ ಅವಘಡ ಸಂಬಂಧಿಸಿದ್ದು, ಸುಭಾಷ್ ತ್ರಿವೇದಿ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡಲಾಗಿದೆ. ಅವಘಡದಲ್ಲಿ 35 ಮಂದಿ ಸಜೀವದಹನಗೊಂಡಿದ್ದಾರೆ. ಐದು ಸದಸ್ಯರ ತಂಡ ಪ್ರಕರಣದ ತನಿಖೆ ಮಾಡಲಿದೆ. 72 ಗಂಟೆಗಳೊಳಗೆ ಪ್ರಾಥಮಿಕ ವರದಿಯನ್ನು ನೀಡಲಿವೆ.
ಅಗ್ನಿ ಅವಘಡಕ್ಕೆ ಕಾರಣವೇನು?,
ಗೇಮಿಂಗ್ ಝೋನ್ಗೆ ಅನುಮತಿ ನೀಡುವ ಸಂದರ್ಭದಲ್ಲಿ ಈ ಕೆಲವು ವಿಷಯಗಳ ಬಗ್ಗೆ ಗಮನಹರಿಸಲಾಗಿತ್ತೆ?, ಗೇಮಿಂಗ್ ಝೋನ್ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರೇ? ಎಂಬೆಲ್ಲಾ ವಿಚಾರಗಳ ಕುರಿತು ತನಿಖೆ ನಡೆಸಲಿದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಆತಂಕ ಎದುರಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಗೇಮ್ ಝೋನ್ ಸುಟ್ಟು ಕರಕಲಾಗಿದೆ.