ಮುದ್ದೇಬಿಹಾಳ ಪಟ್ಟಣದ ಮಿನಿ ವಿಧಾನಸೌಧ ಕಟ್ಟಡದ ಬಳಿ ಅಗ್ನಿ ಅವಘಡ

ಜಿಲ್ಲೆ

ವಿಜಯಪುರ: ಮುದ್ದೇಬಿಹಾಳ ಪಟ್ಟಣದ ಮಿನಿ‌ ವಿಧಾನಸೌಧ ಕಟ್ಟಡದ ಬಳಿ ಅಗ್ನಿ ಅವಘಡ ಸಂಭವಿಸಿದೆ. ಬಾಂಡ್ ರೈಟರ್ಸ್ ಅಂಗಡಿಗಳು‌ ಬೆಂಕಿಗಾಹುತಿಯಾಗಿವೆ. ಅಂಗಡಿಯೊಂದರಲ್ಲಿ ಯುಗಾದಿ ಅಮಾವಾಸ್ಯೆ ಪೂಜೆಗೆ ಹಚ್ಚಿಟ್ಟಿದ್ದ ದೀಪದಿಂದ‌ ಬೆಂಕಿ ಹೊತ್ತಿರೋ ಸಂಶಯ ವ್ಯಕ್ತವಾಗಿದೆ. ಬಾಂಡ್ ರೈಟರ್ಸ್ ಗಳಾದ ಎಂ ಪಿ ಕನ್ನೂರ್, ಆರ್ ಎಸ್ ಸಂಕೀನ್, ಪಿ ಎಸ್ ಹಿರೇಮಠ, ಶಿವಾನಂದ ಪೊಲೇಶಿ ಎಂಬವ ವರಿಗೆ ಸೇರಿದ ಅಂಗಡಿಗಳು ಮತ್ತು ಅಂಗಡಿಗಳಲ್ಲಿದ್ದ ಸಾಮಗ್ರಿಗಳು ಬೆಂಕಿಗಾಹುತಿಯಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣಾ‌ ವ್ಯಾಪ್ತಿ ಘಟನೆ ದಾಖಲಾಗಿದೆ.

Leave a Reply

Your email address will not be published. Required fields are marked *