ಮೈಸೂರು: ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿನ (Hebbal Industrial Area) ಜೂಪಿಟರ್ ಪಟಾಕಿ ಅಂಗಡಿಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಭಾರೀ ಸ್ಫೋಟ ಉಂಟಾಗಿದೆ. ಆಕಾಶದೆತ್ತರಕ್ಕೆ ಬೆಂಕಿಯ (Fire) ಕೆನ್ನಾಲಿಗೆ ಚಿಮ್ಮಿದ್ದು, ಲಕ್ಷಾಂತರ ಮೌಲ್ಯದ ಪಟಾಕಿಗಳು ಬೆಂಕಿಗಾಹುತಿಯಾಗಿದೆ.
ಪಟಾಕಿಗಳು ಸ್ಫೋಟಗೊಂಡ ಪರಿಣಾಮ ಸುಮಾರು 2 ಗಂಟೆಗಳ ಕಾಲ ಅಂಗಡಿ ಹೊತ್ತಿ ಉರಿದಿದ್ದು, ಅಂಗಡಿ ಅಕ್ಕಪಕ್ಕದ ಮನೆಗಳಿಗೂ ಬೆಂಕಿ ತಗುಲಿದೆ. ಅಲ್ಲದೇ ಅಂಗಡಿಯ ಹೊರಾಂಗಣದಲ್ಲಿ ನಿಲ್ಲಿಸಿದ್ದ 2 ಕಾರುಗಳು ಸುಟ್ಟು ಭಸ್ಮವಾಗಿವೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಬೆಂಕಿ ನಂದಿಸಲು ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ, ಬಳಿಕ ಹೆಬ್ಬಾಳು ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.