ಬೆಂಗಳೂರು: ಐವರು ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಸಂಪರ್ಕದಲ್ಲಿದ್ದ ಹಲವರ ವಿಚಾರಣೆ ನಡೆಸುತ್ತಿದ್ದು, ಶಂಕಿತ ಉಗ್ರರು ಜುನೈದ್, ಟಿ.ನಾಸೀರ್ ಮಾತ್ರವಲ್ಲದೆ ಹಲವರ ಸಹಾಯ ಪಡೆದಿದ್ದಾರೆ. ಇನ್ನು ಸಿಸಿಬಿ ತನಿಖೆ ನಡೆಸುತ್ತಿರುವ ಪ್ರಕರಣವನ್ನೇ ಎನ್ಐಎ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದೆ.
2024ರಲ್ಲಿ ರಾಜ್ಯದಲ್ಲಿ ಉಗ್ರರ ಟಾರ್ಗೆಟ್ ಆಗಿದ್ದ ಪ್ಲಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆ ಮಾಹಿತಿಯಿಂದ ಸಿಸಿಬಿ ನಡೆಸಿರೋ ಕಾರ್ಯಚರಣೆಗೆ ಇಡೀ ರಾಜ್ಯವೇ ನಿಟ್ಟಿಸುರು ಬಿಟ್ಟಿದೆ. ರಾಜ್ಯದಲ್ಲಿ ಸದ್ದಿಲ್ಲದೆ ಶೇಖರಣೆ ಆಗ್ತಿದ್ದ ಗ್ರೆನೇಡ್, ಗನ್ ಮತ್ತು ಗುಂಡುಗಳನ್ನ ಕಂಡು ಪೊಲೀಸ್ರೆ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಉಗ್ರರಿಗೆ ಟಾರ್ಗೆಟ್ ಇದ್ದಿದ್ದು ಜನನಿಬಿಡ ಪ್ರದೇಶ. ಆದ್ರೆ ಅದಕ್ಕೆ ಆವ್ರೂ ಆಯ್ಕೆ ಮಾಡಿಕೊಂಡಿದ್ದ ಬಸ್ ಸ್ಟಾಂಡೋ ರೈಲ್ವೇ ಸ್ಟೇಷನ್ನೋ ಅಲ್ಲ ಬದಲಿಗೆ. ಚುನಾವಣಾ ರ್ಯಾಲಿಯನ್ನ. ಎಸ್ ಒಂದೇ ಏಟಿಗೆ ಎರಡು ಕಲ್ಲು ಹೊಡೆಯೋ ಪ್ಲಾನ್ ಮಾಡಿದ್ದ ಉಗ್ರರು ಮುಂಬರೋ ಲೋಕಾಸಭಾ ಚುನಾವಣೆಯ ಬಿಜೆಪಿ ಪಾರ್ಟಿ ರ್ಯಾಲಿಯನ್ನ ಟಾರ್ಗೆಟ್ ಮಾಡಿ ಪ್ಲಾನ್ ಫಿಕ್ಸ್ ಮಾಡಿದ್ರಂತೆ. ಒಂದು ಕಡೆ ಅವ್ರು ಅಂದು ಕೊಂಡಂತೆ ಹಿಂದೂತ್ವ ನಾಯಕರು ಹಾಗೂ ಜನರ ಮೇಲೆ ಒಟ್ಟಿಗೆ ಅಟ್ಯಾಕ್ ಮಾಡಲು ಬಿಜೆಪಿ ಚುನಾವಣೆ ರ್ಯಾಲಿ ಟಾರ್ಗೆಟ್ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ.
ಇನ್ನೂ ಈ ಪ್ಲಾನ್ ಎಲ್ಲವೂ ಜುನೈದ್ ಮತ್ತು ಟಿ.ನಾಜಿರ್ ಪ್ಲಾನ್ ಆಗಿದ್ದು ಸದ್ಯ ಬಂಧನವಾಗಿರೋ ಐವರು ಶಂಕಿತರಿಗೆ ಇವ್ರ ಯಾವ ಪ್ಲಾನ್ ಕೂಡ ಗೊತ್ತಿರ್ಲಿಲ್ವಂತೆ. ಜುನೈದ್ ಕಳ್ಸೋ ಗ್ರೆನೇಡ್, ಪಿಸ್ತೋಲ್ ಮತ್ತು ಗುಂಡುಗಳನ್ನ ಜುನೈದ್ ಕಳುಹಿಸಿದ ವ್ಯಕ್ತಿಗಳಿಂದ ರಿಸಿವ್ ಮಾಡಿ ಇಲ್ಲಿ ಸ್ಟೋರ್ ಮಾಡೋ ಕೆಲಸ ಮಾಡ್ತಿದ್ದಾಗೆ ಪ್ರಾಥಮಿಕವಾಗಿ ಗೊತ್ತಾಗಿದೆ.