ಅಡುಗೆ ಸೋಡಾ ಕೇವಲ ಇಡ್ಲಿ, ದೋಸೆ, ಬೋಂಡಾಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತದೆ, ಎಂದು ಅಂದುಕೊಳ್ಳಬೇಡಿ, ಇದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಇದೆ. ಉದಾಹರಣೆಗೆ ನೋಡುವುದಾದರೆ ಸಡನ್ ಆಗಿ ಕಂಡು ಬರುವ ಎದೆಯುರಿ, ಗ್ಯಾಸ್ಟ್ರಿಕ್, ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕೂಡ ನೈಸರ್ಗಿಕವಾಗಿ ನಿವಾರಿಸುತ್ತದೆ.
ನೋಡಿ ಇಷ್ಟೆಲ್ಲಾ ಪ್ರಯೋಜನಗಳನ್ನು ಒಳಗೊಂಡಿರುವ ಬೇಕಿಂಗ್ ಸೋಡಾ ತನ್ನಲ್ಲಿ ರಾಸಾಯನಿಕ ಅಂಶಗಳನ್ನು ಕೂಡ ಒಳಗೊಂಡಿರುವುದರಿಂದ ಮನೆ ಕ್ಲೀನಿಂಗ್ ವಿಷ್ಯದಲ್ಲಿ ಕೂಡ ಸಾಕಷ್ಟು ಪ್ರಯೋಜನಕ್ಕೆ ಬರುತ್ತದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೋಡೋಣ.
ಫ್ರಿಡ್ಜ್ನಿಂದ ವಾಸನೆ ಬರುತ್ತಿದ್ದರೆ
ಒಂದು ವೇಳೆ, ಸ್ವಲ್ಪ ದಿನಗಳವರೆಗೆ ಮನೆಯಿಂದ ಹೊರಗೆ ಹೋಗುವ ಕೆಲಸಗಳಿದ್ದರೆ ಫ್ರಿಡ್ಜ್ ಅಥವಾ ರೆಫ್ರಿಜರೇಟರ್ನ ಬಟನ್ ಆಫ್ ಮಾಡಿ ಹೋಗುತ್ತೇವೆ. ಆದರೆ ತುಂಬಾ ದಿನಗಳವರೆಗೆ ಇದನ್ನು ಹಾಗೆಯೇ ಬಿಟ್ಟರೆ, ಫ್ರಿಡ್ಜ್ ಬಳಗಿನಿಂದ ವಾಸನೆ ಬರಲು ಶುರುವಾಗುತ್ತದೆ. ಮನೆಗೆ ಬಂದು ಫ್ರಿಡ್ಜ್ ಡೋರ್ ಓಪನ್ ಮಾಡಿದಾಗ, ಒಂದು ರೀತಿಯ ಗಾಢವಾದ ವಾಸನೆ ನಿಮಗೆಯೇ ಅಸಹ್ಯ ಅನಿಸಬಹುದು.
ಇಂತಹ ಸಮಯದಲ್ಲಿ ಇದನ್ನು ಸ್ವಚ್ಛ ಮಾಡಲು ಮೊದಲು, ಅದರಲ್ಲಿರುವ ಎಲ್ಲಾ ಆಹಾರ ಪದಾರ್ಥಗಳನ್ನು ಹೊರಗಿಟ್ಟು, ಬೇಕಿಂಗ್ ಸೋಡಾ ಹೊಂದಿರುವ ಬಾಟಲ್ ಮುಚ್ಚಳ ತೆಗೆದು ಅದರಲ್ಲಿ ಇರಿಸಿ ಬಾಗಿಲನ್ನು ಹಾಕಿ, ಆಮೇಲೆ ಸದ್ಯಕ್ಕೆ ಫ್ರಿಡ್ಜ್ ಬಾಗಿಲನ್ನು ತೆರೆಯಲು ಹೋಗಬೇಡಿ. ಇಡೀ ರಾತ್ರಿ ಹಾಗೆ ಬಿಟ್ಟುಬಿಡಿ ಯಾಕೆಂದರೆ ಬೇಕಿಂಗ್ ಸೋಡಾ ರೆಫ್ರಿಜರೇಟರ್ ನಲ್ಲಿ ಕಂಡು ಬರುವ ವಾಸನೆಯನ್ನು ಹೀರಿಕೊಳ್ಳುತ್ತದೆ.
ಓವನ್ ಸ್ವಚ್ಛತೆಗೆ
ಹೆಚ್ಚಾಗಿ ಮೈಕ್ರೋವೇವ್ನಲ್ಲಿ ಆಹಾರಗಳನ್ನು ಬಿಸಿ ಮಾಡಿ ಸೇವಿಸುವ ಅಭ್ಯಾಸ ಎಲ್ಲರಿಗೂ ರೂಢಿ ಯಾಗಿ ಬಿಟ್ಟಿದೆ. ಆದರೆ ಕೆಲವೊಮ್ಮೆ ಆಹಾರ ಪದಾರ್ಥಗಳನ್ನ ಬಿಸಿ ಮಾಡುವ ಸಂದರ್ಭದಲ್ಲಿ, ಆಕಸ್ಮಾತ್ ಆಗಿ ಚೆಲ್ಲಿ ಗಾಢವಾದ ಕಲೆಗಳಾಗಿ ಬಿಡುತ್ತದೆ.
ಆದರೆ ಕೆಲವೊಮ್ಮೆ ಇಂತಹ ಕಲೆಗಳು ಸುಲಭವಾಗಿ ಬಿಟ್ಟು ಹೋಗಲ್ಲ, ಅಲ್ಲಿಗೆ ಅಂಟಿಕೊಂಡು ಬಿಡುತ್ತವೆ! ಅದರಲ್ಲೂ ಈ ಎಣ್ಣೆ ಯಾಂಶ ಅಥವಾ ಜಿಡ್ಡಿನಾಂಶ ಇರುವ ಪದಾರ್ಥಗಳಿರುವ ಕಲೆಗಳು ಅಂಟಿಕೊಂಡು ಬಿಟ್ಟರೆ, ಅದನ್ನು ಸ್ವಚ್ಛ ಮಾಡಲು ಹರಸಹಾಸ ಪಡಬೇಕಾಗುತ್ತದೆ.
ಇಂತಹ ಸಮಯದಲ್ಲಿ ಮೈಕ್ರೋವೇವ್ ಓವನ್ನ, ಒಳಗಿರುವ ಟ್ರೇಗಳನ್ನು ಹೊರಗೆ ತೆಗೆದು, ಇದಕ್ಕೆ ಅಡುಗೆ ಸೋಡಾ, ನೀರು ಮತ್ತು ವಿನಗರ್ ಮಿಶ್ರಣ ಮಾಡಿದ ಪೇಸ್ಟನ್ನು ಹಚ್ಚಿ ಸ್ವಚ್ಛ ಗೊಳಿಸಿ ಹಾಗೂ ಓವೆನ್ ಒಳಭಾಗದಲ್ಲಿ ಕೂಡ ಈ ಪೇಸ್ಟನ್ನು ಹಚ್ಚಿ ಸ್ವಚ್ಛ ಮಾಡಬಹುದು. ವಿಶೇಷ ಏನೆಂದರೆ ಅಡುಗೆ ಸೋಡಾದ ಜೊತೆಗೆ ವಿನಗರ್ ಬಳಸಿರುವುದರಿಂದ ಎಂತಹ ಕಠಿಣ ಕಲೆಗಳಾದರೂ ಹೋಗಿ ಬಿಡುತ್ತದೆ.
ಗೋಡೆಗಳಲ್ಲಿಕಲೆಗಳಾಗಿದ್ದರೆ
ಮನೆಯಲ್ಲಿನ ಗೋಡೆಗಳು ಆಗಾಗ ಕೊಳೆ ಆಗುತ್ತಲೇ ಇರುತ್ತವೆ. ಅದರಲ್ಲೂ ಅಡುಗೆ ಮನೆಯ ಕೋಣೆಗಳಲ್ಲಿ ಈ ಸಮಸ್ಯೆ ಜಾಸ್ತಿಯಾಗಿ ಕಂಡುಬರುತ್ತದೆ. ಒಂದು ವೇಳೆ ಇಂತಹ ಸಮಸ್ಯೆಗಳು, ನಿಮ್ಮ ಮನೆಯಲ್ಲೂ ಇದ್ದರೆ, ಹೀಗೆ ಮಾಡಿ ನೋಡಿ-ಒಂದೆರಡು ಟೇಬಲ್ ಚಮಚ ಆಗುವಷ್ಟು ಬೇಕಿಂಗ್ ಸೋಡಾ ಅಥವಾ ಅಡುಗೆ ಸೋಡಾಕ್ಕೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಆಮೇಲೆ ಒಂದು ಸ್ಪಂಜು ತೆಗೆದುಕೊಂಡು ಅದಕ್ಕೆ ಬೇಕಿಂಗ್ ಸೋಡಾದ ಪೇಸ್ಟ್ ಹಚ್ಚಿಕೊಂಡು ಕಲೆಯಾಗಿರುವ ಗೋಡೆಗಳನ್ನು ಒರೆಸಿ ನೋಡಿ, ಗೋಡೆಯಲ್ಲಿರುವ ಕಲೆಗಳು, ತನ್ನಿಂದ ತಾನೇ ಮಾಯವಾಗಿ ಬಿಡುತ್ತದೆ.
ಪಾತ್ರೆಯಲ್ಲಿಅಂಟಿರುವಎಣ್ಣೆಜಿಡ್ಡಿನಕಲೆಗಳು
ಕೆಲವೊಮ್ಮೆ ಎಣ್ಣೆ ಜಿಡ್ಡಿನ ಕಲೆಗಳು ಪಾತ್ರೆಗಳ ಸೌಂದರ್ಯವನ್ನೇ ಹಾಳು ಮಾಡುತ್ತವೆ! ಇದನ್ನು ಎಷ್ಟೇ ಸ್ವಚ್ಛ ಮಾಡಿದರೂ ಕೂಡ ಅಷ್ಟು ಸುಲಭವಾಗಿ ಈ ಕಲೆಗಳು ಪಾತ್ರೆಯಿಂದ ಹೋಗಲ್ಲ! ಇಂತಹ ಸಮಯದಲ್ಲಿ ಬಿಸಿಬಿಸಿ ನೀರಿಗೆ ಒಂದೆರಡು ಟೇಬಲ್ ಚಮಚ ಆಗುವಷ್ಟು ಬೇಕಿಂಗ್ ಸೋಡಾ ಮಿಕ್ಸ್ ಮಾಡಿ ತಳ ಗಟ್ಟಿದ ಪಾತ್ರೆಯ ಮೇಲೆ ಸುರಿದು ಸ್ವಲ್ಪ ಹೊತ್ತು ಹಾಗೆ ಬಿಡಿ. ಆಮೇಲೆ ಪಾತ್ರೆ ಉಜ್ಜುವ ಸ್ಪಂಜ್ ನಿಂದ ಇದನ್ನು ಸುಲಭವಾಗಿ ಸ್ವಚ್ಛ ಮಾಡಬಹುದು.
ಸ್ಪಂಜ್ಸ್ವಚ್ಛತೆಗೆ
ಸಾಮಾನ್ಯವಾಗಿ ಅಡುಗೆ ಮನೆಯ ಸ್ವಚ್ಛತೆಗೆ ಬಳಸುವ ಸ್ಪಂಜ್ಗಳು, ಬಹು ಬೇಗನೇ ಕಪ್ಪಾಗಿ ಬಿಡುತ್ತವೆ, ಅಲ್ಲದೇ ನೋಡಲು ಕೂಡ ಗಲೀಜು ರೀತಿ ಕಾಣಿಸಿಬಿಡುತ್ತದೆ! ಒಂದೆರಡು ದಿನಗಳವರೆಗೆ ಮಾತ್ರ ಬಳಕೆ ಮಾಡಿದ ಸ್ಪಂಜ್ಗಳನ್ನು ಬಿಸಾಡಿ, ಮೊತ್ತೊಂದು ಹೊಸ ಸ್ಪಂಜ್ ಗಳನ್ನು ತೆಗೆದು ಕೊಳ್ಳುತ್ತೇವೆ. ಮರುಬಳಕೆ ಮಾಡಬಹುದು ಎಂಬ ಸಣ್ಣ ವಿಷಯ ಕೂಡ ನಮಗೆ ಗೊತ್ತಿರುವುದಿಲ್ಲ!
ಒಂದು ವೇಳೆ ಮನೆ ಬಳಕೆಗೆ ಬಳಸಿರುವ ಸ್ಪಂಜ್ಗಳು ಕಪ್ಪಾಗಿದ್ದರೆ, ಒಂದು ಬಕೆಟ್ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ನಾಲ್ಕು ಟೇಬಲ್ ಚಮಚ ಬೇಕಿಂಗ್ ಸೋಡಾ ಹಾಕಿ, ಈ ಹಿಂದೆ ಬಳಕೆ ಮಾಡಿದ ಸ್ಪಂಜ್ ಗಳನ್ನು ಅದರಲ್ಲಿ ಇಡಿ ರಾತ್ರಿ ನೆನೆಹಾಕಿ. ನಂತರ ಮರುದಿನ ಬೆಳಗ್ಗೆ ಸ್ಪಂಜ್ ನಲ್ಲಿ ಕಂಡುಬರುವ ಎಲ್ಲಾ ಕಲುಷಿತ ಅಂಶಗಳು ದೂರವಾಗಿ, ಮತ್ತೊಮ್ಮೆ ಮರುಬಳಕೆಗೆ ನಿಮಗೆ ಲಭ್ಯವಾಗುತ್ತವೆ.