ಥೈರಾಯ್ಡ್ ಗ್ರಂಥಿಯು ಅಂತಃಸ್ರಾವಕ ವ್ಯವಸ್ಥೆಯ ಒಂದು ಭಾಗವಾಗಿದೆ ಮತ್ತು ಕೆಲವು ಹಾರ್ಮೋನುಗಳನ್ನು ಉತ್ಪಾದಿಸುವ ಮತ್ತು ಬಿಡುಗಡೆ ಮಾಡುವ ಮೂಲಕ ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸುತ್ತದೆ. ಥೈರಾಯ್ಡ್ ಗ್ರಂಥಿಯು ಮಾನವನ ದೇಹದ ಪ್ರಮಖ ಅಂಗವಾಗಿದ್ದು, ದೇಹದ ಪ್ರಮುಖ ಕಾರ್ಯಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಹಲವು ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗಬಹುದು.
ಥೈರಾಯ್ಡ್ ಸಮಸ್ಯೆ ಉಂಟಾಗಲು ಕಾರಣವೇನು?
* ಅಯೋಡಿನ್ ಕೊರತೆ
* ಪ್ರತಿರಕ್ಷಣಾ ವ್ಯವಸ್ಥೆಯು ಥೈರಾಯ್ಡ್ ಮೇಲೆ ದಾಳಿ ಮಾಡುವ ಆಟೋಇಮ್ಯೂನ್ ಕಾಯಿಲೆಗಳು, ಇದು ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ಗೆ ಕಾರಣವಾಗುತ್ತದೆ.
* ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಉರಿಯೂತ
* ಗಂಟುಗಳು ಅಥವಾ ಕ್ಯಾನ್ಸರ್ ಅಲ್ಲದ ಗಡ್ಡೆಗಳು
* ಕ್ಯಾನ್ಸರ್ ಗಡ್ಡೆಗಳು
* ವಿಕಿರಣ ಚಿಕಿತ್ಸೆ, ಥೈರಾಯ್ಡ್ ಶಸ್ತ್ರಚಿಕಿತ್ಸೆ ಮತ್ತು ಕೆಲವು ಔಷಧಗಳು ಸೇರಿದಂತೆ ವೈದ್ಯಕೀಯ ಚಿಕಿತ್ಸೆಗಳು
* ಕೆಲ ಅನುವಂಶೀಯ ಕಾಯಿಲೆಗಳು
ಥೈರಾಯ್ಡ್ ಚಯಾಪಚಯ, ತಾಪಮಾನ ಮತ್ತು ಹೃದಯ ಬಡಿತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಥೈರಾಯ್ಡ್ ಆರೋಗ್ಯವನ್ನು ಕಾಪಾಡಿಕೊಳ್ಳಲು ನೀವು ಮಾಡಬಹುದಾದ ಕೆಲವು ವಿಷಯಗಳು ಇಲ್ಲಿವೆ. ಆರೋಗ್ಯಕರ ಥೈರಾಯ್ಡ್ ಅನ್ನು ಕಾಪಾಡಿಕೊಳ್ಳಲು ನೀವು ಮಾಡಬಹುದಾದ ಪ್ರಮುಖ ವಿಷಯವೆಂದರೆ ಸಮತೋಲಿತ ಆಹಾರವನ್ನು ಸೇವಿಸುವುದು. ಅದರಲ್ಲೂ ಮೆಡಿಟರೇನಿಯನ್ ಆಹಾರಕ್ರಮ ಉತ್ತಮ. ಮೆಡಿಟರೇನಿಯನ್ ಆಹಾರಕ್ರಮದ ಆಹಾರಗಳು ಇಲ್ಲಿವೆ…
* ಹಣ್ಣುಗಳು
* ತರಕಾರಿಗಳು
* ಬೀನ್ಸ್
* ಕಾಳುಗಳು
* ಮೀನು ಮತ್ತು ಸಮುದ್ರ ಆಹಾರಗಳು
* ನಟ್ಸ್ ಮತ್ತು ಬೀಜಗಳು
* ಆರೋಗ್ಯಕರ ಎಣ್ಣೆ