ಪುರುಷರು ಶೇವಿಂಗ್ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದೇ ಇದ್ದಲ್ಲಿ, ಮುಖದಲ್ಲಿ ಗಾಯವಾಗುವುದರ ಜೊತೆಗೆ ನಿಮ್ಮ ಮುಖವು ಚೆನ್ನಾಗಿ ಕಾಣದೇ ಇರಬಹುದು ಅದಕ್ಕಾಗಿ, ಪರಿಪೂರ್ಣ ಕ್ಷೌರಕ್ಕೆ ಅನುಕೂಲವಾಗುವಂತೆ ಈ ಲೇಖನವು ಉಪಯುಕ್ತ ಸಲಹೆಗಳನ್ನು ಒದಗಿಸುತ್ತದೆ. ಪುರುಷರು ಮುಖವನ್ನು ಶೇವ್ ಮಾಡುವಾಗ ಏನೆಲ್ಲಾ ಗಮನದಲ್ಲಿಟ್ಟುಕೊಳ್ಳಬೇಕು?
ಶೇವಿಂಗ್ ಮಾಡುವ ಮೊದಲು ಮೊದಲು ನಿಮ್ಮ ಮುಖದ ಕೂದಲನ್ನು ಮೃದುವಾಗಿಸಲು ಬಿಸಿನೀರಿನಿಂದ ತೊಳೆಯಿರಿ.
ಇದರಿಂದ ಚರ್ಮದ ರಂಧ್ರದಲ್ಲಿರುವ ಕೊಳೆ ಮತ್ತು ಜಿಡ್ಡಿ ನಾಂಶವು ಹೋಗಿ ಸ್ವಚ್ಚವಾಗುತ್ತದೆ. ಕೂದಲನ್ನು ಮೃದುವಾಗಿ ಸಲು ನೈಸರ್ಗಿಕ ಪದಾರ್ಥಗಳನ್ನು ಹೊಂದಿರುವ ಪ್ರಿ ಶೇವ್ ಆಯಿಲ್ ಬಳಸಿ.
ಶೇವಿಂಗ್ ಮಾಡಲು ನೀವು ಶೇವಿಂಗ್ ಕ್ರೀಮ್ ಉಪಯೋಗಿಸಿ ಈ ಕ್ರೀಮ್ ನೈಸಗಿಕ ಪದಾರ್ಥಗಳನ್ನು ಬಳಸಿ ಮಾಡಿದ್ದಾದಲ್ಲಿ ಅತ್ಯಂತ ಒಳ್ಳೆಯದು. ಆದಷ್ಟು ಕೆಮಿಕಲ್ ಯುಕ್ತ ಕ್ರಿಮ್ ತಪ್ಪಿಸಿ ಇದರಿಂದ ಮುಖದ ಮೇಲೆ ಆಗುವ ಅಡ್ಡಪರಿಣಾಮಗಳನ್ನು ತಡೆಗಟ್ಟಬಹುದು. ಶೇವಿಂಗ್ ಕ್ರಿಮ್ ಅಥವಾ ಜೆಲ್ ಹಚ್ಚಲು ಮೃದುವಾದ ಬ್ರಷ್ ಬಳಸಿ.
ನೀವು ಶೇವಿಂಗ್ ಮಾಡಲು ಉತ್ತಮ ರೇಜರ್ ನ ಆಯ್ಕೆ ಮಾಡಿ. ಸಿಂಗಲ್ -ಬ್ಲೇಡ್ ,ಡಬಲ್ -ಬ್ಲೇಡ್ ಅಥವ ಮಲ್ಟಿ ಬೇಡ್ ರೇಜರ್ ಗಳನ್ನು ಬಳಸಬಹುದು.
ಉಪಕರಣವನ್ನು ಬಳಸುವ ಮೊದಲು ಅದರ ತೀಕ್ಷ್ಣತೆಯನ್ನು ಒಮ್ಮೆ ಪರೀಕ್ಷಿಸಿ ನಿಮಗೆ ಸರಿಯಾಗಿದೆ ಎಂದು ಖಚಿತಪಡಿಸಿ ಕೊಂಡ ನಂತರ ಬಳಸಿ. ನಿಮಗೆ ಇಷ್ಟವಾದಲ್ಲಿ ಎಲೆಕ್ಟ್ರಿಕ್ ರೇಜರ್ ಕೂಡಾ ಬಳಸಬಹುದು
ನಿಮ್ಮ ಗಡ್ಡದ ಕೂದಲಿನ ಬೆಳವಣಿಗೆಯ ದಿಕ್ಕಿನಲ್ಲಿ ರೇಜರ್ ಬಳಸಿ. ಇದರಿಂದ ಶೇವಿಂಗ್ ಮಾಡಲು ಸುಲಭವಾಗುವುದು ಮಾತ್ರ ವಲ್ಲದೆ, ಗಾಯಗಳಾಗುವುದನ್ನು ತಡೆಯುತ್ತದೆ.
ರೇಜರ್ ನಿಂದ ಗಡ್ಡ ತೆಗೆಯುವಾಗ ಹೆಚ್ಚು ಒತ್ತಡ ಮುಖಕ್ಕೆ ಹಾಕ ಬೇಡಿ. ರೇಜರನ್ನು ಮೃದುವಾಗಿ ಹಿಡಿದು ಶೇವಿಂಗ್ ಮಾಡಿ ಬಳಸುವ ಮೊದಲು ಹಾಗೂ ಬಳಕೆಯ ನಂತರ ರೇಜರನ್ನು ಬಿಸಿನೀರಿನಿಂದ ಸ್ವಚ್ಚಗೊಳಿ
ಮೊದಲಿಗೆ ಒಮ್ಮೆ ಶೇವಿಂಗ್ ಮಾಡಿದ ಕೂಡಲೇ ಒಮ್ಮೆ ನಿಮ್ಮ ಮುಖವನ್ನು ನೀರಿನಲ್ಲಿ ತೊಳೆದು ನಂತರ ಪುನಃ ಸ್ವಚ್ಚವಾಗಿ ರುವ ಮುಖದ ಮೇಲೆ ರೇಜರ್ ನಿಂದ ನಯವಾಗಿ ಶೇವಿಂಗ್ ಅನ್ನು ಪುನರಾವರ್ತಿಸಿ ಹೀಗೆ ಮಾಡುವುದರಿಂದ ಮೃದುವಾದ ತ್ವಚೆಯನ್ನು ಪಡೆಯಬಹುದು.
ನಿಮ್ಮ ಕೂದಲಿನ ಬೆಳವಣಿಗೆಯ ವಿರುದ್ದ ದಿಕ್ಕಿನಲ್ಲಿ ರೇಜರನ್ನು ನಿಧಾನವಾಗಿ ಗ್ಲೈಡ್ ಮಾಡಿ. ನೀವು ಯೂಸ್ ಮಾಡಿ ಬಿಸಾಡುವಂತಹ ರೇಜರ್ ಬಳಸುತ್ತಿದ್ದಲ್ಲಿ ಅದನ್ನು ಮೂರು ಬಾರಿಗಿಂತ ಹೆಚ್ಚು ಬಳಸ ಬೇಡಿ.
ಬ್ಲೇಡ್ ಬದಲಿಸುವ ರೇಜರ್ ಬಳಸುತ್ತಿದ್ದಲ್ಲಿ ಪ್ರತಿ 6-7 ಕ್ಷೌರದ ನಂತರ ನಿಮ್ಮ ಸಾಮಾನ್ಯ ರೇಜರ್ ಬ್ಲೇಡ್ ಅನ್ನು ನೀವು ಬದಲಾಯಿಸಬಹುದು
ತಣ್ಣೀರಿನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿದ ನಂತರ, ನಿಮ್ಮ ಚರ್ಮವನ್ನು ಶಮನಗೊಳಿಸಲು ಆಫ್ಟರ್ ಶೇವ್ ಅನ್ನು ಬಳಸಿ. ಆಫ್ಟರ್ ಶೇವ್ ಲೋಷನ್ ಅಥವಾ ಜೆಲ್ ನಿಮ್ಮ ಚರ್ಮವನ್ನು ಬ್ಯಾಕ್ಟೀರಿಯಾದ ಸೋಂಕು, ಚರ್ಮದ ಸಮಸ್ಯೆ, ತುರಿಕೆ ಅಥವಾ ಕೆಂಪಾಗುವಿಕೆಯಿಂದ ರಕ್ಷಿಸುತ್ತದೆ.
ಸರಿಯಾಗಿ ಶೇವಿಂಗ್ ಮಾಡದೇ ಇದ್ದಲ್ಲಿ ಚರ್ಮಕ್ಕೆ ಗಾಯ, ತುರಿಕೆ ಅಥವಾ ಇತ್ಯಾದಿ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು.