ಧಾರವಾಡ: 2 ಎಕರೆ ಜಮೀನು ಇದ್ದರೆ ಪರಿವರ್ತನೆ ಮಾಡಲು ಅವಕಾಶ ನೀಡುತ್ತೇವೆ. ಭೂಪರಿವರ್ತನೆ ಮಾಡಿಸಿಕೊಂಡು ಆಹಾರ ಉದ್ಯಮ ಮಾಡಬಹುದು ಎಂದು ಧಾರವಾಡದಲ್ಲಿ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್(MB Patil) ಹೇಳಿದ್ದಾರೆ.
ರಾಜ್ಯದಲ್ಲಿ ಆಹಾರ ಉದ್ಯಮ ಬೆಳೆಯಲು ಪ್ರೋತ್ಸಾಹ ನೀಡುತ್ತೇವೆ. ಭೂಪರಿವರ್ತನೆ ಬಗ್ಗೆ ಸಿಎಂ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳುತ್ತೇವೆ. ಮಾವಿನ ಮಾರುಕಟ್ಟೆ ದರ ಕುಸಿದಾಗ ಫುಡ್ ಪ್ರೊಸೆಸ್ ಮಾಡಬಹುದು. ಕೈಗಾರಿಕಾ ಪ್ರದೇಶದಲ್ಲಿ ತಪ್ಪು ಏನಿದೆ ನೋಡಿಕೊಂಡು ಸುಧಾರಣೆ ತರುತ್ತೇವೆ ಎಂದರು.