ಗದಗ: ರಾತ್ರಿಯಿಡಿ ಗುಡುಗು, ಗಾಳಿ ಸಹಿತ ಸುರಿದ ಭಾರಿ ಮಳೆಗೆ ಗದಗ ಜಿಲ್ಲೆಯ ರೈತರ ಬದುಕು ಮತ್ತೆ ಸರ್ವನಾಶವಾಗಿದೆ. ಮೊದಲೇ ಸಾಲದ ಸುಳಿಯಲಿ ಸಿಲುಕಿ ಒದ್ದಾಡುತ್ತಿದ್ದವರಿಗೆ ನೆಲಕಚ್ಚಿದ ಈರುಳ್ಳಿ ಬೆಳೆ ನೋಡಿ ಕಂಗಾಲಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಅಡರಕಟ್ಟಿ ಗ್ರಾಮದಲ್ಲಿ ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ನೀರು ಪಾಲಾಗಿದೆ.
ಆರಂಭದಲ್ಲಿ ಚೆನ್ನಾಗಿ ಮಳೆಯಾಗಿದ್ರಿಂದ ಭರ್ಜರಿಯಾಗಿ ಈರುಳ್ಳಿ ಬೆಳೆದಿದ್ದರುಈ ಬಾರಿ ಕ್ವಿಂಟಾಲ್ ಈರುಳ್ಳಿಗೆ 4-5 ಸಾವಿರ ರೇಟ್ ಆಗಿದ್ದರಿಂದ ಫುಲ್ ಖುಷಿಯಾಗಿದ್ದ ರೈತರಿಗೆ ಮಳೆ ಬರೆ ಎಳೆದಿದೆ.
ಈರುಳ್ಳಿ ಮಾರಾಟ ಮಾಡಿದ್ರೆ ಲಕ್ಷಾಂತರ ರೂಪಾಯಿ ಹಣ ಬರುತ್ತೆ ಅಂತ ನಿರೀಕ್ಷೆಯಲ್ಲಿದ್ದ ರೈತರು ಮತ್ತೆ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ಕೂಡ ಬೆಳೆ ಹಾನಿಯಾದ ಜಮೀನುಗಳಿಗೆ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡದ ನಿರ್ಲಕ್ಷ್ಯ ಮಾಡಿದ್ದಾರೆ. ಬೆಳೆ ಹಾನಿಯಿಂದ ಕಣ್ಣೀರು ಹಾಕುತ್ತಿರುವ ರೈತರು ಕೃಷಿ ಇಲಾಖೆ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.