ಬಾಂಬ್ ಸ್ಫೋಟದಿಂದ ಸುದ್ದಿ ಮಾಡಿದ್ದ ರಾಮೇಶ್ವರಂ ಕೆಫೆ ಈಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದೆ. ದಕ್ಷಿಣ ಭಾರತದ ಉಪಹಾರಕ್ಕೆ ಹೆಸರುವಾಸಿಯಾದ ಬೆಂಗಳೂರು ಮೂಲದ ಹೈದರಾಬಾದ್ನ ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ವಿಭಾಗವು ದಾಳಿ ನಡೆಸಿದೆ
ತೆಲಂಗಾಣದ ರಾಮೇಶ್ವರಂ ಕೆಫೆ ಹೊಟೇಲ್ ಮೇಲೆ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಹಲವಾರು ಆಹಾರ ಸುರಕ್ಷತಾ ಉಲ್ಲಂಘನೆಯಾಗಿರುವುದನ್ನು ಪತ್ತೆ ಹಚ್ಚಿದೆ. ಈ ರೆಸ್ಟೋರೆಂಟ್ನಲ್ಲಿ ಅವಧಿ ಮುಗಿದ ಮತ್ತು ಲೇಬಲ್ ಮಾಡದ ಆಹಾರ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ.
ಆಹಾರ ಸುರಕ್ಷತಾ ಇಲಾಖೆ ಪ್ರಕಾರ, 16,000 ಮೌಲ್ಯದ 100 ಕೆ.ಜಿ ಉದ್ದಿನ ಬೇಳೆ, 10 ಕೆಜಿ ನಂದಿನಿ ಮೊಸರು ಮತ್ತು ಎಂಟು ಲೀಟರ್ ಹಾಲು ಅವಧಿ ಮುಗಿದಿದ್ದು, ಈ ಎಲ್ಲಾ ವಸ್ತುಗಳು ಅಡುಗೆಮನೆಯಲ್ಲಿ ಕಂಡುಬಂದಿದೆ.
ಸರಿಯಾಗಿ ಲೇಬಲ್ ಮಾಡದ 450 ಕೆಜಿ ಅಕ್ಕಿ, 20 ಕೆಜಿ ಬಿಳಿ ಅಲಸಂದೆ ಮತ್ತು 300 ಕೆಜಿ ಬೆಲ್ಲವನ್ನು ಸಹ ವಶಪಡಿಸಿಕೊಳ್ಳಲಾಗಿದೆ” ಎಂದು ಆಹಾರ ಸುರಕ್ಷತಾ ಇಲಾಖೆ ತಿಳಿಸಿದೆ.
ಆಹಾರ ನಿರ್ವಾಹಕರಿಗೆ ವೈದ್ಯಕೀಯ ಫಿಟ್ನೆಸ್ ಪ್ರಮಾಣಪತ್ರವನ್ನು ಸಲ್ಲಿಸಲಾಗಿಲ್ಲ ಮತ್ತು ರಾಮೇಶ್ವರಂ ಕೆಫೆಯಲ್ಲಿ ಕಸದ ಬುಟ್ಟಿಯನ್ನು ಮುಚ್ಚಳದಿಂದ ಮುಚ್ಚಿಲ್ಲ ಎಂಬುದು ವರದಿಯಾಗಿದೆ.