ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿಯಾಗಿರುವಂತ ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದಲ್ಲಿ ಈ ಸಲ ಸಾವಯವ ಬೆಲ್ಲದ ಜಿಲೇಬಿ ಎಲ್ಲರನ್ನೂ ಸೆಳೆಯುತ್ತಿದೆ. 500ಕ್ಕೂ ಹೆಚ್ಚು ಜನರು ಸೇರಿ ಕನಿಷ್ಠ 12 ಲಕ್ಷಕ್ಕೂ ಹೆಚ್ಚು ಜಿಲೇಬಿ ತಯಾರಿಸುವ ಗುರಿಯನ್ನು ಹೊಂದಿದ್ದಾರೆ. ಬರುವಂತಹ ಭಕ್ತರಿಗೆ ದಾಸೋಹದಲ್ಲಿ ಈ ಜಿಲೇಬಿಗಳನ್ನು ಹಂಚಲಾಗುತ್ತಿದೆ.
ಪ್ರತಿ ವರ್ಷ ವಿಶೇಷ ತಿನಿಸುಗಳನ್ನು ಹಂಚುವ ಮೂಲಕ ಗವಿಮಠದ ಜಾತ್ರೆಯ ದಾಸೋಹ ಖ್ಯಾತಿಯನ್ನು ಪಡೆದುಕೊಂಡಿದೆ. ಸಿಂಧನೂರಿನ ಸಮಾನ ಮನಸ್ಕ ಗೆಳೆಯರ ಬಳಗದವರು ಈ ಸಲ ಲಕ್ಷಾಂತರ ಜನರಿಗೆ ಸಾವಯ ಬಲ್ಲದ ಜಿಲೇಬಿಗಳನ್ನು ಗುಣಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಕಳೆದ ಎರಡು ವರ್ಷಗಳಿಂದ 5 ಲಕ್ಷಕ್ಕೂ ಹೆಚ್ಚು ಶೇಂಗಾ ಹೋಳಿಗೆಗಳನ್ನು ತಂಬೂರಿನಲ್ಲಿ ತಯಾರಿಸಿಕೊಂಡು ಬಂದು ಇಲ್ಲಿ ದಾಸೋಹಕ್ಕೆ ನೀಡುತ್ತಿದ್ದರು.
ಈ ಸಲ ಗವಿಮಠದ ಆವರಣದಲ್ಲಿಯೇ ಜಿಲೇಬಿಗಳನ್ನು ತಯಾರಿಸುವ ಪ್ರಕ್ರಿಯೆ ನಡೆಯುತ್ತಿದೆ ಕನಿಷ್ಠ 12ರಿಂದ 15 ಲಕ್ಷ ಜಿಲೇಬಿಗಳನ್ನು ತಯಾರಿಸಲಾಗುತ್ತಿದ್ದು ಇದಕ್ಕಾಗಿ 50 ಕ್ವಿಂಟಲ್ ಮೈದ ಇಟ್ಟು 125 ಕ್ವಿಂಟಲ್ ಸಾವಯವ ಬೆಲ್ಲ ಎರಡು ನೂರು ಲೀಟರ್ ತುಪ್ಪ 10 ಕೆ.ಜಿ ಯಾಲಕ್ಕಿ 200 ಲೀಟರ್ ಮೊಸರನ್ನು ಬಳಕೆ ಮಾಡಲಾಗುತ್ತಿದೆ. ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಮಹಾರಥೋತ್ಸವದ ದಿನ ಹಾಗೂ ಮರುದಿನ ಬರುವಂತಹ ಲಕ್ಷಾಂತರ ಭಕ್ತರಿಗೆ ಈ ಜಿಲೇಬಿಗಳನ್ನು ನೀಡಲಾಗುವುದು ಎಂದು ಸಮಾನ ಮನಸ್ಕ ಗೆಳೆಯರ ಬಳಗದ ಸಂಘಟಕರು ಹೇಳಿದ್ದಾರೆ.