ಶಿಮ್ಲಾ: ತುಕ್ಡೆ-ತುಕ್ಡೆ ಗ್ಯಾಂಗ್ ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಸುತ್ತುವರಿದಿದೆ. ಅವರ ಸಿದ್ಧಾಂತವನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ನಿಮ್ಮ ಮಕ್ಕಳಿಗೆ ಸೇರಬೇಕಾದ ಆಸ್ತಿ ಅವರ ಬಳಿಯೇ ಉಳಿಯಬೇಕೋ ಅಥವಾ ಮುಸ್ಲಿಮರಿಗೆ ಸೇರಬೇಕೋ ಅನ್ನೋದನ್ನ ನೀವು ನಿರ್ಧರಿಸಬೇಕು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಚುನಾವಣಾ ರ್ಯಾಲಿ ವೇಳೆ ಮಾತನಾಡಿದ ಅವರು, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುವಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮ್ಮ ಮಕ್ಕಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚುವುದು, ಈ ದೇಶದ ಅಣ್ವಸ್ತ್ರಗಳನ್ನು ನಾಶಪಡಿಸುವುದು,
ಜಾತಿವಾದ ಮತ್ತು ಪ್ರಾದೇಶಿಕತೆಯ ಮೇಲೆ ದೇಶವನ್ನು ವಿಭಜನೆ ಮಾಡುವುದು, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶವನ್ನು ಆಳುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಾವು ಮುಸ್ಲಿಮರಿಗೆ (Muslims) ಎಲ್ಲಾ ಹಕ್ಕುಗಳನ್ನು ಸಮಾನವಾಗಿ ನೀಡಿದ್ದೇವೆ. ಆದ್ರೆ ಅದನ್ನು ಧರ್ಮದ ಆಧಾರದಲ್ಲಿ ನೀಡಿಲ್ಲ. ನಿಮ್ಮ ಮಕ್ಕಳ ಆಸ್ತಿ ನಿಮ್ಮ ಬಳಿ ಉಳಿಯಬೇಕೋ ಅಥವಾ ಮುಸ್ಲಿಮರ ಪಾಲಾಗಬೇಕೋ ನಿರ್ಧರಿಸಿ ಎಂದು ಎಚ್ಚರಿಸಿದ್ದಾರೆ.