ನಾವು ಹೇಳುತ್ತಿರುವ ಈ ಸ್ಟೋರಿ ಸುಳ್ಳಲ್ಲ ಸತ್ಯ. ಭಾರತದಲ್ಲಿರುವ ಆ ಒಂದು ಊರಿಗೆ ವಿದೇಶಿ ಮಹಿಳೆಯರು ಗರ್ಭ ಧರಿಸಲು ಅಂತಾನೆ ಬರ್ತಾರೆ. ಹಾಗಿದ್ರೆ ಅದು ಯಾವ ಊರು!?, ಏನಿದರ ವಿಶೇಷತೆ ತಿಳಿಯೋಣ ಬನ್ನಿ.
ಭಾರತ ದೇಶ ಹಲವು ವೈವಿಧ್ಯತೆಗಳನ್ನು ಹೊಂದಿದೆ. ಇದೇ ಕಾರಣದಿಂದ ವಿದೇಶಿಯರಿಗೆ ನಮ್ಮ ದೇಶ ಆಕರ್ಷಣೆಯ ಸ್ಥಳವಾಗಿದೆ. ಆದ್ರೆ ಭಾರತದಲ್ಲಿ ವಿಚಿತ್ರವಾದ ಹಳ್ಳಿಯೊಂದಿದೆ. ಈ ಹಳ್ಳಿಗೆ ವಿದೇಶಿ ಮಹಿಳೆಯರು ಗರ್ಭಿಣಿಯಾಗಲೆಂದೇ ಬರುತ್ತಾರಂತೆ. ಹಾಗಿದ್ರೆ ಆ ಹಳ್ಳಿ ಯಾವುದು ಗೊತ್ತಾ? ಇಲ್ಲಿದೆ ನೋಡಿ.
ಕಾರ್ಗಿಲ್ನಿಂದ 70 ಕಿಲೋಮೀಟರ್ ದೂರದಲ್ಲಿರುವ ಲಡಾಖ್ನಲ್ಲಿ ಒಂದು ಗ್ರಾಮವಿದೆ. ಈ ಗ್ರಾಮವನ್ನು ಆರ್ಯ ಕಣಿವೆ ಎಂದು ಸಹ ಕರೆಯಲಾಗುತ್ತದೆ. ಹೊರ ದೇಶಗಳ ಸಾಕಷ್ಟು ಜನರು ಇಲ್ಲಿಗೆ ಆಗಮಿಸುತ್ತಾರೆ. ಅದರಲ್ಲೂ ಯುರೋಪ್ ದೇಶಗಳ ಮಹಿಳೆಯರು ಮಾತ್ರ ಇಲ್ಲಿಗೆ ಬರುವುದು ಇಲ್ಲಿನ ಪುರುಷರಿಂದ ಗರ್ಭ ಧರಿಸಲು ಮಾತ್ರ ಎಂದು ಹೇಳಲಾಗುತ್ತದೆ. ಇದು ಸ್ವಲ್ಪ ವಿಚಿತ್ರವೆನಿಸಿದರೂ, ಹಲವು ಮಾಧ್ಯಮ ವರದಿಗಳ ಪ್ರಕಾರ ಇದು ನಿಜ.
ಇದರ ಹಿಂದಿನ ರಹಸ್ಯವೇನು? ಬ್ರೋಕ್ಪಾ ಎಂಬ ಬುಡಕಟ್ಟಿನ ಜನರು ಲಡಾಖ್ನ ಈ ಆರ್ಯ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಈ ಜನರು ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು ಎಂದು ಹೇಳಲಾಗುತ್ತದೆ. ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು ತೊರೆಯುತ್ತಿದ್ದಾಗ, ಅವನ ಸೈನ್ಯದ ಕೆಲವು ಜನರು ಇಂದಿಗೂ ಭಾರತದಲ್ಲಿ ಉಳಿದಿದ್ದಾರೆ ಎಂದು ಹೇಳಲಾಗುತ್ತದೆ.
ಆದ್ದರಿಂದ ಈ ಅಲೆಗ್ಸಾಂಡರ್ ಸೈನ್ಯದ ಜನರಿಂದ ಮಹಿಳೆಯರು ಗರ್ಭಿಣಿಯಾದ್ರೆ, ಹುಟ್ಟೊ ಮಗು ಉತ್ತಮ ಮೈಕಟ್ಟು ಮತ್ತು ಸದೃಢ ದೇಹವನ್ನು ಹೊಂದುತ್ತಾರೆ ಎಂಬ ನಂಬಿಕೆಯಿದೆ. ಇದೇ ಆಸೆಯನ್ನು ಇಟ್ಟುಕೊಂಡು ಯುರೋಪ್ ಮಹಿಳೆಯರು ಇಲ್ಲಿಗೆ ಆಗಮಿಸುತ್ತಾರೆ
ಮೊದ ಮೊದಲು ಇದಕ್ಕೆ ಹೆಚ್ಚು ಕ್ರೇಜ್ ಇರಲಿಲ್ಲ ಎಂದು ಹೇಳುತ್ತಾರೆ, ಆದರೆ ಆನ್ಲೈನ್ ಪ್ರಚಾರದ ನಂತರ ವಿದೇಶಿ ಮಹಿಳೆಯರ ಸಂಖ್ಯೆ ಇಲ್ಲಿ ಹೆಚ್ಚಾಯಿತು. ಆದರೆ ಗರ್ಭಿಣಿಯಾದ ನಂತರ ವಿದೇಶಿ ಮಹಿಳೆಯರು ಮರಳಿ ತಮ್ಮ ದೇಶಕ್ಕೆ ತೆರಳುತ್ತಾರಂತೆ. ಅಷ್ಟೇ ಅಲ್ಲದೆ ಇದಕ್ಕಾಗಿ ವಿದೇಶಿ ಮಹಿಳೆಯರು ಇಲ್ಲಿನ ಪುರುಷರಿಗೆ ಹಣವನ್ನೂ ನೀಡುತ್ತಾರೆ ಎಂದು ಹೇಳಲಾಗಿದೆ.