ಇಸ್ಲಮಾಬಾದ್: ಪಾಕಿಸ್ತಾನ್ ಮಾಜಿ ಪ್ರಧಾನಿ ಇಮ್ರಾನ್ಖಾನ್ ವಿರುದ್ಧದ ಪ್ರಕರಣಗಳ ತನಿಖೆಗೆ ಉನ್ನತ ಮಟ್ಟದ ಜಂಟಿ ತನಿಖಾ ಸಮಿತಿ(ಜೆಐಟಿ) ರಚಿಸಿರುವುದಾಗಿ ಪಾಕಿಸ್ತಾನ ಸರಕಾರ ಘೋಷಿಸಿದೆ.
ಇಮ್ರಾನ್ ಹಾಗೂ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಕಾರ್ಯಕರ್ತರ ವಿರುದ್ಧ ದಾಖಲಾಗಿರುವ 4 ಪ್ರಕರಣಗಳ ತನಿಖೆಯನ್ನು ಈ ಸಮಿತಿಗೆ ವಹಿಸಲಾಗುವುದು ಎಂದು ಆಂತರಿಕ ಸಚಿವ ರಾಣಾ ಸನಾವುಲ್ಲ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಜೆಐಟಿಯು ಹೆಚ್ಚುವರಿ ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ಸ್ಪೆಷಲ್ ಬ್ರಾಂಚ್ ಪಂಜಾಬ್ ಜುಲ್ಫಿಕರ್ ಹಮೀದ್ ಅವರು ನೇತೃತ್ವ ವಹಿಸಿದ್ದು, ಇಂಟರ್-ಸರ್ವಿಸ್ ಇಂಟೆಲಿಜೆನ್ಸ್ (ಐಎಸ್ಐ), ಇಂಟೆಲಿಜೆನ್ಸ್ ಬ್ಯೂರೋ (ಐಬಿ), ಮಿಲಿಟರಿ ಇಂಟೆಲಿಜೆನ್ಸ್ (ಎಂಐ) ಮತ್ತು ಡಿಐಜಿ ಹೆಡ್ಕ್ವಾರ್ಟರ್ಸ್ ಇಸ್ಲಾಮಾಬಾದ್ ಅವೈಸ್ ಅಹ್ಮದ್ ಪ್ರತಿನಿಧಿಗಳನ್ನು ಒಳಗೊಂಡಿದೆ ಎಂದು ವರದಿಯಾಗಿದೆ.