ಸ್ಯಾನ್ ಫ್ರಾನ್ಸಿಸ್ಕೋ: ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ಬಳಿಕ ಕಂಪನಿಯಿಂದ ವಜಾಗೊಂಡಿದ್ದ ಮೂವರು ಉನ್ನತ ಅಧಿಕಾರಿಗಳು ತಾವು ಭರಿಸಿರುವ ಕಾನೂನು ವೆಚ್ಚಗಳನ್ನು ಮರುಪಾವತಿಸುವಂತೆ ಇಲಾನ್ ಮಸ್ಕ್ ವಿರುದ್ದ ದಾವೆ ಹೂಡಿದ್ದಾರೆ.
ಇಲಾನ್ ಮಸ್ಕ್ ಕಂಪೆನಿಯ ನಿಯಮಗಳ ಪ್ರಕಾರ ನಡೆದುಕೊಂಡಿಲ್ಲ ಎಂದು ಈ ಮೂವರು ಕಾನೂನು ಹೋರಾಟ ನಡೆಸಿದ್ದರು. ಈ ವೆಚ್ಚವನ್ನು ಇಲಾನ್ ಭರಿಸಬೇಕು ಎಂದು ಟ್ವಿಟರ್ ಮಾಜಿ ಸಿಇಓ ಪರಾಗ್ ಅಗರವಾಲ್, ಮುಖ್ಯ ಹಣಕಾಸು ಅಧಿಕಾರಿ ನೆಡ್ ಸೆಗಲ್ ಮತ್ತು ಮುಖ್ಯ ಕಾನೂನು ಸಲಹೆಗಾರ ವಿಜಯ್ ಗಡ್ಡೆ ದಾವೆ ಹೂಡಿದ್ದಾರೆ
‘ಕಂಪೆನಿ ತಮಗೆ 1 ಮಿಲಿಯನ್ ಡಾಲರ್ಗಿಂತಲೂ ಹೆಚ್ಚು ಹಣವನ್ನು ಕಾನೂನುಬದ್ಧವಾಗಿ ಪಾವತಿಸಬೇಕಾಗಿದೆ’ ಎಂದು ಮಾಜಿ ಸಿಇಓ ಪರಾಗ್ ಅಗರವಾಲ್, ನೆಡ್ ಸೆಗಲ್, ವಿಜಯ ಗಡ್ಡೆ ತಮ್ಮ ದಾವೆಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.