ಶಿವಮೊಗ್ಗ :ಯಾರೇ ಅದರೂ ನೀತಿ ಸಂಹಿತೆ ಅನ್ವಯಿಸುತ್ತದೆ ಎಂಬುದು ಮತ್ತೆ ಸಾಬೀತಾಗಿದೆ. ಇದಕ್ಕೆ ಪೂರಕವಾಗಿ ಇವತ್ತು ಶಿವಮೊಗ್ಗಕ್ಕೆ ಬಂದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನವರ ಹೆಲಿಕಾಪ್ಟರ್ನ್ನು ಕೂಡ ಅಧಿಕಾರಿಗಳು ಪರಿಶೀಲನೆ ನಡೆಸಿದ್ರು. ಇವತ್ತು ಅವರು ವಿವಿಧ ಕಾರ್ಯಕ್ರಮ ಮುಗಿಸಿಕೊಂಡು ಶಿವಮೊಗ್ಗಕ್ಕೆ ಹೆಲಿಕಾಪ್ಟರ್ನಲ್ಲಿಬಂದಿಳಿಯುತ್ತಿದಂತೆ , ಚುನಾವಣಾ ನೀತಿ ಸಂಹಿತೆಯ ಪ್ರೋಟೋಕಾಲ್ ಪ್ರಕಾರ, ಅಧಿಕಾರಿಗಳು ತಪಾಸಣೆ ನಡೆಸಿದ್ರು. ಇನ್ನೂ ಈ ವೇಳೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಪಕ್ಷ ಬಿಟ್ಟು ಹೋಗಿರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದರು. ಅವರ ಆರೋಪಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಬಿಎಸ್ವೈ ಘೋಷಣೆ ಮಾಡುತ್ತಾರಾ ಅಭ್ಯರ್ಥಿ
ಇನ್ನೂ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ಯಾರು ಎಂಬು ಇನ್ನೂ ಸಹ ನಿಕ್ಕಿಯಾಗಿಲ್ಲ. ಅದೇ ಹೊತ್ತಿನಲ್ಲಿ ಶಿವಮೊಗ್ಗ ನಗರಕ್ಕೆ ಬಿ.ಎಸ್.ಯಡಿಯೂರಪ್ಪನವರ ಎಂಟ್ರಿಯಾಗಿದ್ದು, ಸ್ಥಳೀಯ ಮುಖಂಡರ ಜೊತೆ ಮಾಜಿ ಸಿಎಂ ಮಾತುಕತೆ ನಡೆಸ್ತಿದ್ಧಾರೆ. ಅವರ ಮೂಲಕವೇ ಹೈಕಮಾಂಡ್ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.