ಈ ನಡುವೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಅವರಿಗೂ ಆಹ್ವಾನ ನೀಡಲಾಗಿದೆ. ಈ ಮೂಲಕ ಕ್ರೀಡಾಕ್ಷೇತ್ರದ ಗಮನವನ್ನೂ ಸೆಳೆಯಲಾಗಿದೆ. ಟೀಂ ಇಂಡಿಯಾದ ಉತ್ತಮ ಬೌಲರ್ಗಳ ಪೈಕಿ ವೆಂಕಟೇಶ್ ಪ್ರಸಾದ್ ಸಹ ಒಬ್ಬರು. ಭಾರತದ ಪರ ಆಡಿದ 33 ಟೆಸ್ಟ್ ಪಂದ್ಯಗಳಲ್ಲಿ 96 ವಿಕೆಟ್ ಹಾಗೂ 161 ಏಕದಿನ ಪಂದ್ಯಗಳಲ್ಲಿ 196 ವಿಕೆಟ್ ಪಡೆದು ಸಾಧನೆ ಮಾಡಿರುವುದಲ್ಲದೇ ಏಕದಿನ ವಿಶ್ವಕಪ್ ಟೂರ್ನಿಯ ಹಲವು ಪಂದ್ಯಗಳಲ್ಲಿ ದಾಖಲೆಗಳನ್ನ ಮಾಡಿದ್ದಾರೆ.
ನನ್ನ ಜೀವಿತಾವಧಿಯಲ್ಲಿ ಶ್ರೀರಾಮಮಂದಿರದ ನಿರ್ಮಾಣವಾಗುವ ಭರವಸೆ ಮತ್ತು ಬಯಕೆ ಇತ್ತು. ಇದು ಎಂತಹ ಕ್ಷಣ. ಜನವರಿ 22ರಂದು ಶಂಕುಸ್ಥಾಪನೆ ಮಾತ್ರ ನಡೆಯುತ್ತಿಲ್ಲ. ಭಾರತದ ಶ್ರೇಷ್ಠ ಕ್ಷಣದಲ್ಲಿ ಪಾಲ್ಗೊಳ್ಳುವ ದೊಡ್ಡ ಅದೃಷ್ಟ ಮತ್ತು ಆಶೀರ್ವಾದ ನನಗೆ ಸಿಕ್ಕಿದೆ. ನನ್ನ ಜೀವಮಾನದಲ್ಲಿಯೂ ಮಾತ್ರವಲ್ಲದೇ ಭಾರತದ ಅತ್ಯಂತ ವಿಶೇಷ ಕ್ಷಣವಿದು. ಆಹ್ವಾನಕ್ಕಾಗಿ ಧನ್ಯವಾದಗಳು. ಜೈ ಶ್ರೀ ರಾಮ್ ಎಂದು ವೆಂಕಟೇಶ್ ಪ್ರಸಾದ್ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.