ಜನವರಿ 25 ರಿಂದ ಆರಂಭವಾಗಲಿದೆ. ಈ ನಡುವೆ ಆಂಗ್ಲರ ತಂಡದ ಮಾಜಿ ಆಲ್ ರೌಂಡರ್ ಮೊಯೀನ್ ಅಲಿ ಭಾರತ ತಂಡದ ಸರ್ವಶ್ರೇಷ್ಠ ಟಾಪ್ 5 ಆಟಗಾರರನ್ನು ಆಯ್ಕೆ ಮಾಡಿದ್ದು, ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಗೆ ಅಗ್ರಸ್ಥಾನ ನೀಡಿದ್ದಾರೆ. 2014ರಲ್ಲಿ ಇಂಗ್ಲೆಂಡ್ ತಂಡಕ್ಕೆ ಪದಾರ್ಪಣೆ ಮಾಡಿದ ಮೊಯಿನ್ ಅಲಿ, 3 ಸ್ವರೂಪದ ಕ್ರಿಕೆಟ್ ನಲ್ಲೂ ತಮ್ಮ ಆಲ್ ರೌಂಡರ್ ಪ್ರದರ್ಶನದಿಂದ ಬಹುಮೌಲ್ಯ ಆಟಗಾರರಾಗಿದ್ದರು
ಎಂ.ಎಸ್.ಧೋನಿಯೇ ನಂಬರ್ 1 ಆಟಗಾರ. ಆದರೆ ಆತ ಎಂತಹ ಆಟಗಾರ ಎಂಬುದನ್ನು ಬಹುತೇಕ ಜನರು ಮರೆತು ಹೋಗಿದ್ದಾರೆ. ನಾಯಕನಾಗಿ ಟೀಮ್ ಇಂಡಿಯಾಗೆ ಎಲ್ಲ ಟ್ರೋಫಿಯನ್ನು ಅವರು ಗೆದ್ದು ಕೊಟ್ಟಿದ್ದಾರೆ. ವಿರಾಟ್ ಕೊಹ್ಲಿಗೆ ಎರಡನೇ ಸ್ಥಾನ ನೀಡುತ್ತೇನೆ ಎಂದರು.
ತಮ್ಮ ವೃತ್ತಿ ಜೀವನದಲ್ಲಿ ನೈಜ ಆಟವನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ಸುನೀಲ್ ಗವಾಸ್ಕರ್ ಕೂಡ ಉತ್ತಮ ಆಟಗಾರರಾಗಿದ್ದರು. ಆದರೆ ಅವರು ನಾನು ಕ್ರಿಕೆಟ್ ಜೀವನ ಆರಂಭಿಸುವುದಕ್ಕೆ ಮುನ್ನವೇ ವೃತ್ತಿ ಜೀವನ ಮುಗಿಸಿದ್ದರು. ಆದ್ದರಿಂದ ನಾನು ಅವರ ಆಟವನ್ನು ಸಾಕಷ್ಟು ನೋಡಿಲ್ಲ. ಆದರೆ ಸಚಿನ್ ತೆಂಡೂಲ್ಕರ್ ವಿಭಿನ್ನ ಮಟ್ಟದಲ್ಲಿ ಆಡುತ್ತಿದ್ದರು
ನಾನು ಒಬ್ಬ ಬ್ಯಾಟರ್ ಆಗಿ ಈತನ ಆಟವನ್ನು ನೋಡಲು ಬಯಸುತ್ತೇನೆ. ಬಹುಶಃ ನಾನು ಆತನ ಆಟವನ್ನು ನಕಲು ಮಾಡಲು ಪ್ರಯತ್ನಿಸಿದ್ದೆ. ಕೆಲವೊಮ್ಮೆ ಜನರು ಕೂಡ ನನ್ನನ್ನು ಆತನೊಂದಿಗೆ ಹೋಲಿಸುತ್ತಿದ್ದರು. ಆತನೇ ಯುವರಾಜ್ ಸಿಂಗ್. ಆತ ಬ್ಯಾಟನ್ನು ತುಂಬಾ ಸೊಗಸಾಗಿ ಬೀಸುತ್ತಿದ್ದನು. ಯುವರಾಜ್ ಸಿಂಗ್ ಬ್ಯಾಟಿಂಗ್ ಪ್ರದರ್ಶನ ನೋಡಲು ತುಂಬಾ ಸಂತೋಷವಾಗುತ್ತಿತ್ತು ಎಂದರು.