ಕೆಆರ್ ಪುರಂ ಭಾಗದಲ್ಲಿ ನವಜಾತ ಶಿಶುಗಳ ಹಾರೈಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ನೂತನ ಹೈಟೆಕ್ ಓವಂ ಆಸ್ಪತ್ರೆಯನ್ನು ಮಾಜಿ ಸಚಿವ ಬೈರತಿ ಬಸವರಾಜ್ ಟೇಪ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ನೂತನ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬೈರತಿ ಬಸವರಾಜ್ ಅವರು ಈಗಾಗಲೇ ಬೆಂಗಳೂರಿನ ಹಲವು ಭಾಗಗಳಲ್ಲಿ ಓವಂ ಆಸ್ವತ್ರೆ ತಲೆ ಎತ್ತಿದ್ದು ಈವರೆಗೂ 15 ಸಾವಿರಕ್ಕೂ ಅಧಿಕ ನವಜಾತ ಶಿಶುಗಳ ಹಾರೈಕೆ ಮಾಡಿದೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಓವಂ ಆಸ್ವತ್ರೆಯು ಕಾರ್ಯ ನಿರ್ವಹಿಸುತ್ತಿದ್ದು, ಕೆಆರ್ ಪುರಂ ಭಾಗಗಳಲ್ಲಿ ಇರುವ ಬಡ, ಮಧ್ಯಮ ಹಾಗೂ ಶ್ರೀಮಂತ ಕುಟುಂಬಗಳಿಗೂ ಒವಂ ಆಸ್ವತ್ರೆ ಸಹಕಾರಿಯಾಗಲಿದೆ. ಇನ್ನೂ ನೂತನ ಆಸ್ವತ್ರೆಯಲ್ಲಿ ಹೈಟೆಕ್ ಬೆಡ್ ಗಳು, ಆಧುನಿಕ ತಂತ್ರಜ್ಞಾನದ ಮಿಷನ್ ಗಳು, ಐಸಿಯು ತುರ್ತು ಚಿಕಿತ್ಸಾಕ ಸೌಲಭ್ಯಗಳು ಸೇರಿದಂತೆ ತುರ್ತು ಸಂದರ್ಭದಲ್ಲಿ ಜನರಿಗೆ ಅನುಕೂಲವಾಗಲಿದೆ ಎಂದರು.
ಒವಂ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಆದರ್ಶ ಸೋಮಶೇಖರ್ ರವರು ಮಾತನಾಡಿ, ನವಜಾತ ಶಿಶುಗಳ ಹೆಚ್ಚಿನ ಆರೈಕೆಗಾಗಿ ಇನ್ನಷ್ಟು ಹೆಚ್ಚಿನ ಸೌಲಭ್ಯದೊಂದಿಗೆ ನೂತನ ಬ್ರಾಂಚ್ (ಆಸ್ಪತ್ರೆ) ಆರಂಭಿಸಿದ್ದೇವೆ. ತಾಯಿ ಮತ್ತು ಮಗುವಿನ ಹಾರೈಕೆಯಲ್ಲಿ ಮುಂಚೂಣಿಯಲ್ಲಿರುವ ಓವಂ ಆಸ್ಪತ್ರೆ ಕಳೆದ 5 ವರ್ಷಗಳಲ್ಲಿ 15000ಕ್ಕೂ ಹೆಚ್ಚು ನವಜಾತ ಶಿಶುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡಿ ಶೇಕಡಾ 99 ರಷ್ಟು ಬದುಕುಳಿಯುವಿಕೆಯ ಉನ್ನತ ಅಂಕಿ-ಅಂಶಗಳಿಂದ ದೇಶದಲ್ಲೇ ತನ್ನನ್ನು ಗುರುತಿಸಿಕೊಂಡಿದೆ ಎಂದು ಹೇಳಿದರು.
ಪರಿಣಿತ ಪ್ರಸೂತಿ ತಜ್ಞರ ಅತ್ಯುತ್ತಮ ಸೇವೆಯಿಂದ ಈ ಆಸ್ಪತ್ರೆ ಗರ್ಭಧಾರಣೆ ಮತ್ತು ಹೆರಿಗೆ ಸೇವೆಗಳಿಗೆ ಪ್ರತಿಯೊಬ್ಬರ ಆಯ್ಕೆಯಾಗಿದೆ. ಹೆರಿಗೆ ವಿಭಾಗವು ಐವಿಎಫ್ ಸೇವೆ ಮುಂತಾದ ಸೌಲಭ್ಯಗಳನ್ನು ಹೊಂದಿದೆ. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಗೋಪಿನಾಥ್ ರೆಡ್ಡಿ, ಮೆಡಿಕಲ್ ಡೈರೆಕ್ಟರ್ ಡಾ.ವೇಣುಗೋಪಾಲ್, ಕ್ಲಿನಿಕಲ್ ಡೈರೆಕ್ಟರ್ ಮುರುಳಿ ಮೋಹನ್ , ಪಾಲಿಕೆ ನಾಮನಿರ್ದೇಶಿತ ಮಾಜಿ ಸದಸ್ಯ