ಬೆಂಗಳೂರು: ಹೊಸ ಸಂಸತ್’ನ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನ ನಿವಾಸದಲ್ಲಿ ಮಾತನಾಡಿದ ಅವರು, ನೂತನ ಸಂಸತ್ತು ಕಟ್ಟಿರುವುದು ಕಾಂಗ್ರೆಸ್ ಗೆ ಸಹಿಸೋಕೆ ಆಗ್ತಾ ಇಲ್ಲ.
ಬಿಜೆಪಿಗರು ಕಟ್ಟಿದರು, ಮೋದಿ ಕಟ್ಟಿದ್ರು ಎಂಬ ನೋವು ಕಾಂಗ್ರೆಸ್ ಇದೆ. ಪಾಂಡವರ ಇಂದ್ರಪ್ರಸ್ತಕ್ಕೆ ಹೋಗಿದ್ದ ದುರ್ಯೋಧನಾದಿ ಕೌರವರು ಅದನ್ನು ನೋಡಿ ಹೊಟ್ಟೆ ಉರಿದುಕೊಂಡಿದ್ರು. ಈಗ ಅದೇ ರೀತಿ ಹೊಸ ಸಂಸತ್’ನ ವೈಭೋಗ ನೋಡಿ ಕಾಂಗ್ರೆಸ್ ಹೊಟ್ಟೆ ಉರಿದು ಕೊಳ್ಳುತ್ತಿದೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನು ಕೌರವರಿಗೆ ಹೋಲಿಸಿದರು.
ಇದು ಭಾರತದ ಪ್ರಜಾಪ್ರಭುತ್ವದ ದೇಗುಲ ಅಂತಾ ದೇವೇಗೌಡರು ಚೆನ್ನಾಗಿ ಹೇಳಿದ್ದಾರೆ. ಗುಂಡು-ತುಂಡು, ಸಿಗರೆಟ್ ಕೈಯಲ್ಲಿ ಇದ್ದರೆ ಮಾತ್ರ ಬುದ್ದಿ ಓಡುವ ಜನ ಅವರು. ಅವರು ಮಾತ್ರ ಬುದ್ದಿಜೀವಿಗಳಾ? ಬುದ್ದಿಜೀವಿಗಳ ಬಗ್ಗೆ ಸಿಟಿ ರವಿ ತೀವ್ರ ವಾಗ್ದಾಳಿ ನಡೆಸಿದರು. ಈ ಬುದ್ದಿಜೀವಿಗಳು ಯಾರು? ಮೆಕಾಲೆ ಗರಡಿಯಲ್ಲಿ ಪಳಗಿದವರು. ಮೆಕಾಲೆ ಸದಾ ಭಾರತದ ಬಗ್ಗೆ ದಾಸ್ಯದ ಚಿಂತನೆಯಲ್ಲೇ ಇದ್ದ ನಮ್ಮ ಸಂಸ್ಕೃತಿಗಳ ವಿರುದ್ಧ ಇದ್ದವರು.
ದಾಸ್ಯದಲ್ಲೆ ಇರಬೇಕು ಎನ್ನುವ ಯೋಚನೆಯಲ್ಲಿ ಜನರನ್ನು ತಯಾರು ಮಾಡುವ ಯೋಚನೆ ಅವನದ್ದಾಗಿತ್ತು ಎಂದು ಹೇಳಿದ್ದಾರೆ.