ತುಮಕೂರು :ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಾದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ನೂತನ ಕಛೇರಿ ಯನ್ನು ತುಮಕೂರು ಗ್ರಾಮಾಂತರ ಮಾಜಿ ಶಾಸಕರಾದ ಶ್ರೀ ಗೌರಿಶಂಕರ್ ರವರು ಉದ್ಘಾಟನೆ ಮಾಡಿದರು. ನಂತರ ಅವರು ಮಾತನಾಡಿ ಸರ್ಕಾರದ ಈ ಮಹತ್ವದ ಯೋಜನೆಗಳು ಎಲ್ಲಾ ವರ್ಗದ ಜನರಿಗೆ ತಲುಪುವ ಸಲುವಾಗಿ
ಸರ್ಕಾರದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಮತ್ತು ಸನ್ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ರವರ ಆಶಯ ದಂತೆ ಎಲ್ಲಾ ವರ್ಗದ ಜನರಿಗೆ ಈ ಯೋಜನೆ ಗಳು ತಲುಪುವಂತೆ ಮಾಡುವ ಸಲುವಾಗಿ ಈ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕಚೇರಿ ಯು ಕಾರ್ಯ ಯೋಜನೆ ಯನ್ನು ರೂಪಿಸಲಾಗಿದೆ ಎಂದು ಹೇಳಿದರು.
ಈ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ನೂತನ ಅಧ್ಯಕ್ಷ ಉಪಾಧ್ಯಕ್ಷ ಮತ್ತು ಸದಸ್ಯರುಗಳಿಗೆ ಸನ್ಮಾನಿಸಿಲಾಯಿತು. ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ L ರಮೇಶ್ ಮತ್ತು ಉಪಾಧ್ಯಕ್ಷರಾದ HN ಮಂಜುನಾಥ್ ಸದಸ್ಯರುಗಳಾದ ರಾಮಸ್ವಾಮಿ ಮಂಜುನಾಥ್ ವಿರೂಪಾಕ್ಷ BN ಮಂಜುಳಾ K ಕೆಂಪನರಸಯ್ಯ B ರವಿಕಿರ್ತಿ K ಪಾಂಡುರಂಗ K ರಮೇಶ್. ಶಶಿಧರ್ NG ರಾಘವೇಂದ್ರ ಮತ್ತು ಕೇಶವ್ ರವರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.