ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ದೇಶದ ಉನ್ನತ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ವಶಕ್ಕೆ ಎಂಟು ದಿನಗಳ ಕಾಲ ನೀಡಿ ಆದೇಶ ಹೊರಡಿಸಿದೆ.
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನ ನ್ಯಾಯಾಲಯಕ್ಕೆ 10 ದಿನಗಳ ಕಸ್ಟಡಿ ನೀಡುವಂತೆ ನ್ಯಾಷನಲ್ ಅಕೌಂಟಬಿಲಿಟಿ (NAB) ಮನವಿ ಮಾಡಿತ್ತು.
ನಿನ್ನೆ ಇಸ್ಲಾಮಾಬಾದ್’ನಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಖಾನ್ ಬಂಧಿಸಲಾಯಿತು. ಪೊಲೀಸ್ ಪ್ರಧಾನ ಕಚೇರಿಯಲ್ಲಿ ವಿಶೇಷವಾಗಿ ಕರೆಯಲಾದ ನ್ಯಾಯಾಲಯದಲ್ಲಿ ಹಾಜರಾಗುವ ಮೊದಲು ರಾತ್ರೋರಾತ್ರಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು.
ಕಸ್ಟಡಿಯಲ್ಲಿ ತನಗೆ ಚಿತ್ರಹಿಂಸೆ ನೀಡಲಾಯಿತು ಮತ್ತು ಶೌಚಾಲಯವನ್ನ ಬಳಸಲು ಸಹ ಅವಕಾಶ ನೀಡಲಿಲ್ಲ ಎಂದು ಇಮ್ರಾನ್ ಖಾನ್ ನ್ಯಾಯಾಲಯದಲ್ಲಿ ಆರೋಪಿಸಿದ್ದಾರೆ.