ಇತ್ತೀಚೆಗೆ ಅಂಬರೀಶ್ ಹಾಗೂ ಸಮಲತಾ ಪುತ್ರ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ವಿವಾಹ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತ್ತು. ಕನ್ನಡದ ಜೊತೆಗೆ ಪರಭಾಷೆಯ ಮಂದಿಯೂ ಮದುವೆಗೆ ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಆದರೆ ದೇವೇಗೌಡ ಕುಟುಂಬದ ಯಾರು ಕೂಡ ಮದುವೆಗೆ ಆಗಮಿಸಿರಲಿಲ್ಲ. ಇದೀಗ ಅಭಿ-ಅವಿವಾ ವಿವಾಹಕ್ಕೆ ದೇವೇಗೌಡರು ಶುಭ ಹಾರೈಸಿದ್ದಾರೆ.
ಅಭಿಷೇಕ್ ಗೆಳೆಯ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬರೀಶ್ ಕುಟುಂಬದ ಜೊತೆ ಒಳ್ಳೆಯ ಬಾಂಧವ್ಯವನ್ನು ಇಟ್ಟುಕೊಂಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೂ ಮದುವೆಗೆ ಬಂದಿರಲಿಲ್ಲ. ರಾಜಕಾರಣದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಇಲ್ಲ ಎನ್ನುವ ಮಾತಿದ್ದರೂ, ದೇವೇಗೌಡರ ಕುಟುಂಬ ಗೈರು ನಾನಾ ರೀತಿಯ ಚರ್ಚೆಗೆ ನಾಂದಿ ಹಾಡಿತ್ತು. ಇದೀಗ ದೇವೇಗೌಡ ಅವರ ಎಲ್ಲ ಮಾತಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಅಭಿಷೇಕ್ ಮತ್ತು ಅವಿವಾ ಮದುವೆ ಕಾರ್ಯಕ್ರಮಕ್ಕೆ ಶುಭಕೋರಿ ದೇವೇಗೌಡರು ಪತ್ರವೊಂದನ್ನು ಬರೆದಿದ್ದಾರೆ, ‘ಶ್ರೀಮತಿ ಸುಮಲತಾ ಅವರೇ, ನೀವು ಪ್ರೀತಿ ಪೂರ್ವಕವಾಗಿ ಕಳುಹಿಸಿದ ನಿಮ್ಮ ಪುತ್ರನ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ನನಗೆ ತಲುಪಿದೆ. ನಿಮ್ಮ ಅಭಿಮಾನಕ್ಕಾಗಿ ಧನ್ಯವಾದಗಳು. ಈ ಶುಭ ಸಂದರ್ಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಅಭಿಷೇಕ್ ಹಾಗೂ ಅವಿವಾ ನವ ಮಧುಮಕ್ಕಳಿಗೆ ಶುಭಾಶೀರ್ವಾದಗಳನ್ನು ಕೋರುತ್ತೇನೆ. ಮಧು ಮಕ್ಕಳ ಭವಿಷ್ಯ ಬದುಕು ಸುಖವಾಗಿರಲಿ, ನೆಮ್ಮದಿಯಾಗಿರಲಿ, ಸಂತೋಷವಾಗಿರಲೆಂದು ಹಾರೈಸುತ್ತೇನೆ’ ಎಂದು ಶುಭಾಶಯದ ಪತ್ರದಲ್ಲಿ ತಿಳಿಸಿದ್ದಾರೆ. ಈ ಮೂಲಕ ಹಲವು ಗಾಳಿ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಅಭಿ ಮದುವೆಗೆ ಶುಭ ಕೋರಿ ಪತ್ರಗಳನ್ನು ಕಳುಹಿಸಿದ್ದರು.